ಕೇಂದ್ರದ ವಿರುಧ ಮಂಜಪ್ಪ ವಾಗ್ದಾಳಿ….!!!!!

0
13

ಹೊನ್ನಾಳಿ:

      ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷ ಮುಗಿಯುತ್ತ ಬಂದರೂ ಪ್ರಧಾನಿ ನರೇಂದ್ರಮೋದಿಯವರು ಇಂದಿಗೂ ಜನ ಸಾಮನ್ಯರ ಬದುಕನ್ನು ಹಸನಗೊಳಿಸುವ ಯಾವುದೇ ಅಭಿವೃಧ್ಧಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಆರೋಪಿಸಿದರು.

      ಬುಧವಾರ ತಾಲೂಕು ಕಚೇರಿ ಮುಂಬಾಗ ಕೇಂದ್ರ ಸರಕಾರದ ಹಾಗೂ ಸ್ಥಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.ಇಂಧಿರಾಗಾಂಧಿಯವರು ಗರೀಭಿ ಹಠಾವೋ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಡವರ ಬದುಕಿಗೆ ಆಸರೆಯಾಗಿ ನಿಂತಿದ್ದರು, ಆದರೆ ಮೋದಿ ಪ್ರಧಾನಿ ಆದ ನಂತರ ಅಂತಹ ಯಾವುದೇ ಗುರುತರವಾದ ಕಾರ್ಯಕ್ರವನ್ನು ಹಮ್ಮಿಕೊಳ್ಳಲಿಲ್ಲ ಎಂದು ಕೇಂದ್ರದ ವಿರುದ್ದ ದೂರಿದರು.

      ಇವತ್ತೇನಾದರೂ ಗ್ರಾಪಂ.ನಿಂದ ಹಿಡಿದು ಪ್ರಧಾನಿ ಹುದ್ದೆವೆರಗೂ ಅಧಿಕಾರ ಜನ ಸಾಮನ್ಯರಿಗೆ ಅವಕಾಶ ನೀಡಿದೆ ಎಂದರೆ ಅದು ನಮ್ಮ ನೂರು ವರ್ಷದ ಇತಿಹಾಸ ಇರುವ ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ,ಹಲವಾರು ನೀರಾವರಿ ಯೋಜನೆಗಳ ಜೊತೆಗೆ ಇನ್ನೀತರ ಯೋಜನೆಗಳನ್ನು ನಮ್ಮ ಯುಪಿಎ ಅಧಿಕಾರವಧಿಯಲ್ಲಿ ನೀಡಿದ್ದೇವೆ,ಕೈಗಾರಿಕಾ ಕ್ರಾಂತಿಯನ್ನು ಮಾಡಿದ್ದೇವೆ ಆದರೂ ಅಧಿಕಾರಕ್ಕೆ ಬರುವ ದೃಷ್ಠಿಯಿಂದ ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುತ್ತ ಅಧಿಕಾರಕ್ಕೆ ಬಂದ್ದಿರುವ ನಿಮಗೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

      ನಿಮ್ಮ ಸಾಧನೆ ಏನು ಎಂದರೆ ಸರಕಾರಿ ಹಣದಲ್ಲಿ ವಿದೇಶ ಪ್ರವಾಸ ಹಾಗೂ ನೋಟ್ ಅಮಾನ್ಯಕರಣ ಮಾಡಿರುವುದು ಹಾಗೂ ಬಡವರ ಮೇಲೆ ಇಲ್ಲಸಲ್ಲದ ತೆರಿಗೆ ಹಾಕಿ ದೇಶದಲ್ಲಿ ಅನಧಿಕೃತವಾಗಿ ತುರ್ತುಪರಿಸ್ಥಿಯನ್ನು ಹೇರಿದ್ದಿರಿ ಇದು ನಿಮ್ಮ ಸಾಧನೆ ಎಂದು ಪ್ರಧಾನಿ ನರೇಂದ್ರಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

       ಮರಳು ಸರಕಾರದ ಆಸ್ತಿ,ಅದನ್ನು ನೀವು ಹೇಗೆ ಮರಳನ್ನು ಕೊಡುತ್ತೇನೆ ಎಂದು ಹೇಳಿ ನದಿಗಿಳಿಯುತ್ತಿದ್ದಿರಿ,ಒಬ್ಬ ಶಾಸಕರಾಗಿ ಕಾನೂನನ್ನ ಕೈಗೆ ಎತ್ತಿಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.
ನಿಮಗೆ ನಿಜವಾಗಲೂ ರೈತರ ಬಗೆ ಕಾಳಜಿ ಇದ್ದರೆ ಅಧಿವೇಶನದಲ್ಲಿ ಮಾತನಾಡಿ,ಧರಣಿ ಮಾಡಿ ಅದನ್ನು ಬಿಟ್ಟು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದರು.

       ನೀವು ಪದೇ ಪದೇ ಬಂದ್ ಪ್ರತಿಭಟನೆ ಮಾಡಿದ್ದರೆ ನಿಮ್ಮ ಹಾಗೂ ನಿಮ್ಮ ಪಕ್ಷದ ವಿರುದ್ಧ ಅಂದೇ ನಾವು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಇಂತಹ ಬೂಟಾಟಿಕೆಯನ್ನು ಬಿಟ್ಟು ತಾಲೂಕಿನ ಅಭಿವೃದ್ಧಿ ಮಾಡಿ ಎಂದು ಎಚ್ಚರಿಸಿದರು.ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ ಪ್ರಚಾರ ಪ್ರಿಯ ಶಾಸಕ ತಾನು ಸದಾ ಸುದ್ಧಿಯಲಿರುವುದಕ್ಕಾಗಿ ಇಲ್ಲ ಸಲ್ಲದ ವಿಚಾರಗಳನ್ನು ಕೈಗೆತ್ತಿಕೊಂಡು ಮಾತನಾಡಿವುದು,ಬಂದ್ ಮಾಡುವುದು,ಸರಕಾರದ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವುದು ಇಂತಹ ಶಾಸಕರು ನೀವು ಎಲ್ಲಿಯಾದರೂ ನೋಡಿದ್ದಿರಾ ಎಂದು ಪ್ರಶ್ನಿಸಿದರು.

        ನಾನು ಶಾಸಕನಾಗಿದ್ದಾಗ ನನ್ನ ಮೇಲೆ ಅಕ್ಕಿ ಹಾಗೂ ಮರಳು ಅಕ್ರಮ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ ಶಾಸಕರು ಈಗ ಅವರಿಗೆ ನಾನು ಸವಾಲ್ ಹಾಕುತ್ತೇನೆ ಮತ್ತು ಮಠದಲ್ಲಿ ಬಂದು ಪ್ರಮಾಣ ಮಾಡುತ್ತೇನೆ ಅದಕ್ಕೆ ಶಾಸಕರು ಸಿದ್ದರಾಗಲಿ ನನ್ನ ಬಳಿ ದಾಖಲೆಗಳಿವೆ ಅವುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಶಾಸಕರಿಗೆ ಸವಾಲ್ ಹಾಕಿದರು.

        ಶಾಸಕರು ಅಭಿವೃಧ್ಧಿ ಕಾರ್ಯಗಳನ್ನು ಮಾಡಬೇಕೆನ್ನುವ ಇಚ್ಚಾಶಕ್ತಿ ಇದ್ದರೆ ಕೂಡಲೆ ಸಂಬಂದಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ವಿವಿಧ ಇಲಾಖೆಗಳ ಸಚಿವರ ಬಳಿ ಮನವಿ ಮಾಡಿ ಅನುದಾನ ತರಲಿ ಅದನ್ನು ಬಿಟ್ಟು ಸುಖಾಸುಮನ್ನೆ ಪುಕ್ಕಟೆ ಪ್ರಚಾರ ಪಡೆಯುವುದನ್ನು ನಿಲ್ಲಿಸಲಿ ಎಂದರು
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here