ಶಿರಾ
ಶುದ್ಧ ಕುಡಿಯುವ ನೀರು, ಮಕ್ಕಳ ಆರೋಗ್ಯಕ್ಕೆ ಭದ್ರ ಅಡಿಪಾಯ ಎಂಬ ಉದ್ದೇಶದೊಂದಿಗೆ ನನ್ನ ದುಡಿಮೆಯ ಹಣದಲ್ಲಿ ಶಿರಾ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಜಲಪ್ರಸಾದ (ಫಿಲ್ಟರ್ ಘಟಕ) ನೀಡುತ್ತಿದ್ದೇವೆ. ಶುದ್ದ ನೀರು ಉತ್ತಮ ಆರೋಗ್ಯ ಕಲ್ಪಿಸುವುದರ ಜೊತೆಗೆ ಮಕ್ಕಳ ಮನೋಲ್ಲ್ಲಾಸಕ್ಕೆ ಕಾರಣವಾಗಲಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ಖ್ಯಾತ ರೇಡಿಯಾಲಜಿ ತಜ್ಞ ಡಾ.ಎಂ.ರಾಜೇಶ್‍ಗೌಡ ಹೇಳಿದರು.
ಶಿರಾ ತಾಲ್ಲೂಕಿನ ಕಾಮಗೊಂಡನಹಳ್ಳಿ ಶ್ರೀಮುದ್ದಮ್ಮ ದೇವಿ ನೂತನ ದೇವಸ್ಥಾನಕ್ಕೆ 21 ಅಡಿ ಎತ್ತರದ ಶಿಖರ ನಿರ್ಮಾಣಕ್ಕೆ 7 ಲಕ್ಷ ರೂಪಾಯಿ ಕೊಡುಗೆ ನೀಡಿ, ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಆಸ್ಪತ್ರೆಗಳಿಗೂ ಕೂಡ ಫಿಲ್ಟರ್ ನೀಡುವಂತಹ ಕಾರ್ಯ ಶೀಘ್ರವೇ ನಡೆಯಲಿದೆ. ವಿದ್ಯೆ ಬುದ್ದಿ ನೀಡಿ ಬೆಳೆಸಿದಂತಹ ಈ ನನ್ನ ಶಿರಾ ಮಣ್ಣಿನ ಋಣ ತೀರಿಸಲು ಸಮಾಜ ಸೇವೆ ಮಾಡುವ ಮೂಲಕ ಮುನ್ನಡೆಯುತ್ತಿದ್ದೇನೆ ಎಂದು ಡಾ.ಎಂ.ರಾಜೇಶ್‍ಗೌಡ ಹೇಳಿದರು.
ವೈದ್ಯ ವೃತ್ತಿಯಲ್ಲಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದೇನೆ. ಅದೇ ರೀತಿ ಪುಟ್ಟ ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ ಫಿಲ್ಟರ್ ಘಟಕ ನೀಡಿ ಪುಟ್ಟ ಮಕ್ಕಳಿಗೂ ಶುದ್ದ ಕುಡಿಯುವ ನೀರು ನೀಡುವ ಉದ್ದೇಶ ಹೊಂದಲಾಗಿದೆ. ಶಿರಾ ಭಾಗದ ಸರ್ಕಾರಿ ಶಾಲೆಗಳಿಗೆ ಹಂತ ಹಂತವಾಗಿ ಫಿಲ್ಟರ್ ನೀರಿನ ಘಟಕ ನೀಡುವುದಾಗಿ ಅವರು ಭರವಸೆ ನೀಡಿದರು.
ನಮ್ಮ ತಂದೆ ಸಿ.ಪಿ.ಮೂಡಲಗಿರಿಯಪ್ಪ ಮೂರು ಬಾರಿ ಚಿತ್ರದುರ್ಗ ಸಂಸದರಾಗಿ, ಒಮ್ಮೆ ಶಿರಾ ಕ್ಷೇತ್ರದ ಶಾಸಕರಾಗಿ ಪ್ರ್ರಾಮಾಣಿಕ ಸೇವೆ ಸಲ್ಲಿಸಿ, ಜನ ಮಾನಸದಲ್ಲಿ ಉಳಿದಿದ್ದಾರೆ. ಅವರಂತೆ ನನಗೆ ಅವಕಾಶ ಲಭಿಸಿದರೆ ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆಯೆ ಹೊರತು ರಾಜಕಾರಣಕ್ಕಾಗಿ ಸಮಾಜ ಸೇವೆ ಮಾಡುತ್ತಿಲ್ಲ ಎಂದರು.
ಇದೇ ವೇಳೆ ಮುದ್ದಮ್ಮ ದೇವಸ್ಥಾನ ಸಮಿತಿಯಿಂದ ಡಾ.ಎಂ.ರಾಜೇಶ್ ಗೌಡರನ್ನು ಸನ್ಮಾನಿಸಲಾಯಿತು. ಶ್ರೀಮುದ್ದಮ್ಮ ದೇವಿ ಪಟ್ಟದ ಪೂಜಾರಪ್ಪ ದೊಡ್ಡರಾಜು, ತಾಪಂ ಸದಸ್ಯ ಹುಳಿಗೆರೆ ತಿಮ್ಮಣ್ಣ, ಮುಖಂಡರಾದ ಇ.ಶಿವಾನಂದ್, ಎನ್.ಜಿ.ಕಾಂತರಾಜು, ಪ್ರಗತಿಪರ ರೈತ ಕರೆಕ್ಯಾತನಹಳ್ಳಿ ಜಗದೀಶ್, ಡಾ.ಸತೀಶ್, ವೀರಕ್ಯಾತಪ್ಪ, ಹನುಮಂತೆಗೌಡ, ನಾಗಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
