ಕುಡಿಯುವ ನೀರಿನ ಸಮಸ್ಯೆ : ಅಥಣಿ ಬಂದ್

ಬೆಳಗಾವಿ,

     ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಅನಾವೃಷ್ಟಿಯ ಕಾರಣದಿಂದಾಗಿ ಜನ ಜನಾವರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು, ಸಮಸ್ಯೆ ನಿವಾರಣೆಗೆ ಮುಂದಾಗುವಂತೆ ಆಗ್ರಹಿಸಿ ಕಳೆದ‌ ಒಂದು ತಿಂಗಳಿಂದ ಈ ಭಾಗದಲ್ಲಿ ವಿವಿಧ ಸಂಘಟನೆಗಳು ಹಾಗೂ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣಕ್ಕೆ ಕನ್ನಡಪರ ಸಂಘಟನೆಗಳಿಂದ ಬಂದಗೆ ಕರೆಕೊಡಲಾಗಿತ್ತು.

    ಬಂದ ಹಿನ್ನಲೆಯಲ್ಲಿ ಅಥಣಿ ಪಟ್ಟಣ ಅಂಗಡಿ ಮುಂಗಟ್ಟಗಳು ಬಂದಾಗಿದ್ದು ವ್ಯಾಪಾರ ವಹಿವಾಟ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತಪಡೆಸಲಾಗಿತ್ತು. ಸಾರಿಗೆ ಬಸ್ಸ ಹಾಗೂ‌ ಖಾಸಗಿ ವಾಹನಗಳ ಸಂಚಾರವೂ ಸ್ಥಗಿತಗೊಳಿಸಲಾಗಿತ್ತು.

    ಈ ಮಧ್ಯ ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ವಿಫಲವಾಗುತ್ತಿರುವ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮತ್ತು ಬಂದ್ ಆಚರಿಸುತ್ತಿರುವ ಅಥಣಿ ಹಾಗೂ ಇತರ ಕೃಷ್ಣಾ ತೀರದ ಜನತೆಯನ್ನು ಬೆಂಬಲಿಸಿ ಕನ್ನಡ ಪರ ಮತ್ತು ರೈತ ಪರ ಸಂಘಟನೆಗಳ ಮುಖಂಡರು ಇಂದು ಸೋಮವಾರ ಮುಂಜಾನೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     ಹಿಡ್ಕಲ್ ಜಲಾಶಯದಿಂದ 94 ಕಿ.ಮೀ.ದೂರದ ಕೃಷ್ಣಾ ನದಿಗೆ ಒಂದು ಟಿ ಎಮ್ ಸಿ ನೀರು ಹರಿಸುವ ನಿರ್ಧಾರ ಅತ್ಯಂತ ಅವೈಙ್ಞಾನಿಕವಾಗಿದ್ದು ಇಂದು ಮುಂಜಾನೆ ಬಿಟ್ಟ ನೀರು ಕೃಷ್ಣಾ ನದಿಯನ್ನು ತಲುಪಲು ಸಾಧ್ಯವಿಲ್ಲ.ರಾಜ್ಯದ ಮುಖ್ಯಮಂತ್ರಿಗಳು ಮಹಾರಾಷ್ಟ್ರಕ್ಕೆ ಸರ್ವಪಕ್ಷೀಯ ನಿಯೋಗ ಕಳಿಸಿ ಕೊಯ್ನಾದಿಂದ ನೀರು ಬಿಡಿಸಬೇಕೆ ಹೊರತು ಇಲ್ಲಿಯೇ ಕುಳಿತು ಪತ್ರಗಳನ್ನು ಬರೆಯುವದರಿಂದ ಯಾವದೇ ಪ್ರಯೋಜನವಾಗುವದಿಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap