ಬೆಂಗಳೂರು
ಹಗಲು ರಾಥ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಜಂಗ್ಲಿ, ಚೋರ್ ಇಮ್ರಾನ್ ಸೇರಿ ಐವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 84 ಲಕ್ಷ ಮೌಲ್ಯದ ವಜ್ರ,ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಂಧನದಿಂದ ನಗರ ಸೇರಿ ಮೈಸೂರಿನಲ್ಲಿ ನಡೆದಿದ್ದ 31 ಗಂಭೀರ ಸ್ವರೂಪದ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ರಸ್ತೆಯ ವಾಲ್ಮೀಕಿ ನಗರದ ಇಮ್ರಾನ್ ಖಾನ್ ಅಲಿಯಾಸ್ ಚೋರ್ ಇಮ್ರಾನ್ (32), ನಾಯಂಡನಹಳ್ಳಿಯ ಖದೀರ್ ಅಹ್ಮದ್ ಅಲಿಯಾಸ್ ಖದೀರ್ (24), ಮತ್ತಿಕೆರೆಯ ಪ್ರಕಾಶ ಅಲಿಯಾಸ್ ಜಂಗ್ಲಿ (29), ನಾಗಸಂದ್ರದ ಮಹೇಶ್ (25) ಹಾಗೂ ಅಂದರಹಳ್ಳಿಯ ದಯಾನಂದ್ ಅಲಿಯಾಸ್ ನಂದ (21)ನನ್ನು ಬಂಧಿಸಿ ಭರ್ಜರಿ ಬೇಟೆಯಾಡಿದ ತಂಡಗಳಿಗೆ 1 ಲಕ್ಷ ಬಹುಮಾನವನ್ನು ಘೋಷಿಸಿದರು.
ಚೋರ್‍ಗೆ ಹಲವು ಹೆಸರು
ವಿಲಾಸಿ ಜೀವನಕ್ಕಾಗಿ ಹಗಲು ವೇಳೆಯೇ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಚೋರ್ ಇಮ್ರಾನ್, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಈತ, ಇಮ್ಮು, ಯಾಸಿನ್, ಇಮ್ರಾನ್ ಇನ್ನಿತರ ಹೆಸರುಗಳಲ್ಲಿ ಪರಿಚಯ ಮಾಡಿಕೊಂಡು ಕಳವು ಮಾಡಿದ ಚಿನ್ನ-ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದನು ಎಂದು ಅವರು ತಿಳಿಸಿದರು.
ಚೋರ್ ಇಮ್ರಾನ್ ಮತ್ತೊಬ್ಬ ಬಂಧಿತ ಖದೀರ್ ಜತೆ ಸೇರಿ ಹನುಮಂತನಗರ, ಪುಟ್ಟೇನಹಳ್ಳಿ, ಜೆಪಿ ನಗರ, ಸುದ್ದಗುಂಟೆ ಪಾಳ್ಯ, ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಗಳ 7ಕ್ಕೂ ಹೆಚ್ಚು ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಹನುಮಂತ ನಗರದಲ್ಲಿ ನಡೆದಿದ್ದ ಹಗಲು ಕಳ್ಳತನ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದ ಪೆÇಲೀಸರು ಖಚಿತ ಮಾಹಿತಿಯಾಧರಿಸಿ ಇವರಿಬ್ಬರನ್ನು ಬಂಧಿಸಿ 2 ಕೆಜಿ 200 ಗ್ರಾಂ ಬೆಳ್ಳಿ, 801 ಗ್ರಾಂ ಚಿನ್ನಾಭರಣ ಸೇರಿ 24 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
