ಶಿರಾ:
ಪ್ರಸಕ್ತ ದಿನಮಾನಗಳಲ್ಲಿ ದೈವತ್ವದ ಮೇಲಿನ ನಂಬಿಕೆಗಳು ಕಡಿಮೆಯಾಗುತ್ತಿದ್ದು ಇದರಿಂದ ಸಾಮಾಜಿಕ ಭದ್ರತೆಯೂ ಕಷ್ಟವಾಗುತ್ತದೆ. ದೈವತ್ವದ ಸತ್ಕಾರ್ಯಗಳಿಂದ ಶಾಂತಿ ನೆಮ್ಮದಿ ಲಭಿಸಲು ಸಾದ್ಯವಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹೆಂದೊರೆ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀಜಗನ್ಮಾತೆ ರೇಣುಕಾಂಬ ಸ್ಥಿರ ಮತ್ತು ಚರ ಮೂರ್ತಿಗಳ ಪ್ರತಿಷ್ಟಾಪನೆ ಹಾಗೂ ಕುಂಭಾಭೀಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಲೋಕಸಭೆ ಚುನಾವಣೆ ಮತ ಏಣಿಕೆ ಕಾರ್ಯಕ್ಕೆ ಕೇಲವೆ ದಿನ ಬಾಕಿ ಇದ್ದು, ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಚಿತ್ರದುರ್ಗ ಕ್ಷೇತ್ರದಲ್ಲಿ ಸಂಸದ ಬಿ.ಎನ್.ಚಂದ್ರಪ್ಪ ಗೆಲುವು ಸಾಧಿಸಲಿದ್ದಾರೆ. ತುಮಕೂರು ಜಿಲ್ಲೆಗೆ ಮತ್ತಷ್ಟು ನೀರಾವರಿ ಯೋಜನೆಗಳ ಅನುಷ್ಟಾನಗೊಳಿಸುವ ಉದ್ದೇಶ ಈಡೇರಿಸುವ ದೃಷ್ಠಿಯಿಂದ ಹೆಚ್.ಡಿ.ದೇವೇಗೌಡರ ಗೆಲುವು ಜಿಲ್ಲೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಇದೇ ಸಂಧರ್ಭದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಜಗನ್ಮಾತ ರೇಣುಕಾಂಬ ಟ್ರಸ್ಟ್ ಅಧ್ಯಕ್ಷ ಜಿ.ಕೆ.ಶಿವಣ್ಣ, ಹೆಂದೊರೆ ಗ್ರಾಪಂ ಮಾಜಿ ಸದಸ್ಯರಾದ ಮೋಹನ್‍ಕುಮಾರ್, ಆನಂದ್, ಮುಖಂಡರಾದ ಸೋಮನಾಥ್, ಲಕ್ಷ್ಮೀಕಾಂತ್, ಕೃಷ್ಣಮೂರ್ತಿ, ಹೆಚ್.ಎಲ್.ರಒಗನಾಥ್, ಲೋಕೇಶ್, ನವೀನ, ಕೆ.ಎಂ.ಶ್ರೀನಿವಾಸ್, ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
