ಕಬ್ಬನ್ ಪಾರ್ಕ್ ನಲ್ಲಿ ಸಂಚಾರ ನಿಷೇಧಕ್ಕೆ ಮುಂದಾದ ಸರ್ಕಾರ.!

ಬೆಂಗಳೂರು

    ಲಾಲ್‍ಬಾಗ್‍ನ ಮಾದರಿಯಲ್ಲಿ ಕಬ್ಬನ್ ಪಾರ್ಕ್‍ನಲ್ಲೂ ಕೂಡ ವಾಹನ ಸಂಚಾರವನ್ನು ನಿರ್ಬಂಧಿಸುವ ಪ್ರಸ್ತಾಪವನ್ನು ತೋಟಗಾರಿಕೆ ಇಲಾಖೆ ಸಿದ್ದಪಡಿಸಿದ್ದು ಅದನ್ನು ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ.

   ಕಬ್ಬನ್ ಪಾರ್ಕ್ ಆವರಣದಲ್ಲಿ ಇನ್ನು ಮುಂದೆ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಲು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ನಗರದ ಪೆÇಲೀಸ್ ಇಲಾಖೆ ಮುಖ್ಯಸ್ಥರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

  ಕಬ್ಬನ್ ಪಾರ್ಕ್‍ನಲ್ಲಿನ ವಾಹನ ಸಂಚಾರನ್ನು ಬೇರೆ ರಸ್ತೆಗಳಿಗೆ ಬದಲಾಯಿಸಿದರೆ ಉಂಟಾಗಬಹುದಾದ ಸಂಚಾರ ದಟ್ಟಣೆ ಪರ್ಯಾಯ ರಸ್ತೆಗಳು ಇನ್ನಿತರ ಸಾಧಕ-ಭಾಧಕಗಳ ಚರ್ಚೆಯ ನಂತರ ಕಟಾರಿಯಾ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

   ಕಬ್ಬನ್ ಪಾರ್ಕ್‍ನಲ್ಲಿ ಭಾನುವಾರ ಹಾಗೂ ಎರಡನೇ ಶನಿವಾರ ಮಾತ್ರ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಕಬ್ಬನ್ ಪಾರ್ಕ್ ಆವರಣದೊಳಕ್ಕೆ ಯಾವುದೇ ರೀತಿಯ ವಾಹನಗಳು ಸಂಚರಿಸದಂತೆ ನಾಲ್ಕು ದಿಕ್ಕುಗಳಲ್ಲೂ ಗೇಟ್‍ಗಳಿಗೆ ಬೀಗ ಹಾಕಲಾಗುತ್ತಿದೆ.ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್ ಉದ್ಯಾನವನಗಳು, ನಗರದ ಜನರಿಗೆ ಶುದ್ಧವಾದ ಆಮ್ಲಜನಕ ಒದಗಿಸುವ ಪ್ರಮುಖ ಉದ್ಯಾನವನಗಳು, ಈ ಉದ್ಯಾನವನಗಳನ್ನು ಕಡೆಗಣಿಸಿದರೆ, ನಗರದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಚಿತ ಎನ್ನುತ್ತಾರೆ.

     ಕೆಲ ದಶಕಗಳ ಹಿಂದೆ ಲಾಲ್‍ಬಾಗ್‍ನಂತೆ ಕಬ್ಬನ್ ಪಾರ್ಕ್‍ನಲ್ಲೂ ಯಾವುದೇ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿರಲಿಲ್ಲ. ಆದರೆ, ಹೈಕೋರ್ಟ್, ವಿಧಾನಸೌಧ ಮತ್ತು ಇತರ ಭಾಗಗಳಿಗೆ ಕಬ್ಬನ್ ಪಾರ್ಕ್ ಮೂಲಕವೇ ಸಂಚಾರ ಕಲ್ಪಿಸಲು ಅವಕಾಶ ನೀಡಲಾಗಿತ್ತು.ನಂತರದಲ್ಲಿ ಎಲ್ಲ ವಾಹನಗಳು ಕಬ್ಬನ್ ಪಾರ್ಕ್ ಮೂಲಕವೇ ಸಂಚಾರ ಆರಂಭಿಸುತ್ತಿದ್ದಂತೆಯ ಸಹಜವಾಗಿಯೇ ಉದ್ಯಾನವನದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರ ತೊಡಗಿತು ಎನ್ನುತ್ತಾರೆ. ನಡಿಗೆದಾರರ ಪದಾಧಿಕಾರಿಗಳು ಹಾಗೂ ಪರಿಸರವಾದಿಗಳು.

    ಬೆಂಗಳೂರು ನಗರದ ವಾಯು ಮಾಲಿನ್ಯಕಾರಿ ತಾಣಗಳಲ್ಲಿ ಕಬ್ಬನ್ ಪಾರ್ಕ್ ಕೂಡ ಒಂದು ಎನ್ನುವ ಕುಖ್ಯಾತಿಗೆ ತಲುಪಿದೆ. ಈ ಪಾರ್ಕ್‍ನ್ನು ಹಿಂದಿನ ವೈಭವಕ್ಕೆ ತರಲು ವರ್ಷವಿಡೀ ವಾಹನ ಸಂಚಾರದಿಂದ ಮುಕ್ತಗೊಳಿಸಲಾಗುವುದು ಎಂದು ರಾಜೇಂದ್ರಕುಮಾರ್ ಕಟಾರಿಯಾ ತಿಳಿಸುತ್ತಾರೆ.ವಿದೇಶಗಳಲ್ಲಿ ಪ್ರಮುಖ ಪಾರ್ಕ್‍ಗಳ ಸುತ್ತಮುತ್ತ ವಾಹನಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ವಾಹನಗಳು ನಿಲುಗಡೆ ಮಾಡಿದಲ್ಲಿ ಅಥವಾ ಸಂಚರಿಸಿದರೆ ದಂಡ ವಸೂಲಿ ಮಾಡುವುದಲ್ಲದೆ ಜೈಲು ಶಿಕ್ಷೆಯೂ ಗ್ಯಾರಂಟಿಯಾಗಿದೆ.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link