ಕಾಬೂಲ್:

ಇಷ್ಟು ದಿನ ಬರಿ ಮುಂದುವರಿದ ರಾಷ್ಟ್ರಗಳ ಮೇಲೆ ನಡೆಯುತ್ತಿದ್ದ ಉಗ್ರರ ದಾಳಿಗಳು ಈಗ ಬಡದೇಶಗಳ ಪಟ್ಟಿಯಲ್ಲಿರುವ ಅಫಘಾನಿಸ್ತಾನದ ಮೇಲೂ ದಾಳಿ ನಡೆಸಿರುವ ತಾಲಿಬಾನಿ ಉಗ್ರರರು ಈ ಹೇಯ ಕೃತ್ಯಕ್ಕೆ ಸುಮಾರು 22 ಪೊಲೀಸರು ಮತ್ತು ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ .
ಫರಾಹ್ ಪ್ರಾಂತ್ಯದಲ್ಲಿ ನಡೆದ ಘಟನೆಯಲ್ಲಿ ಪೋಲೀಸ್ ವಾಹನದ ಮೇಲೆ ಉಗ್ರ ದಾಳಿ ನಡೆದಿದೆ .ಈ ವೇಳೆ ಸ್ಥಳದಲ್ಲಿಏ 20 ಪೋಲೀಸರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಉಗ್ರ ದಾಳಿಯ ಹೊಣೆ ಹೊತ್ತ ತಾಲಿಬಾನ್ ಸಂಘಟನೆ 25 ಪೋಲೀಸರನ್ನು ಹೊಡೆದು ಹಾಕಿರುಯ್ವುದಾಗಿ ಘೋಷಿಸಿಕೊಂಡಿದೆ. “ನಾಲ್ಕು ಪೋಲೀಸ್ ವಾಹನಗಳನ್ನು ದ್ವಂಸ ಮಾಡಿ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ” ಎಂದು ಉಗ್ರ ಸಂಘಟನೆ ಸಂದೇಶದಲ್ಲಿ ಹೇಳಿದೆ.
