ಬೀಜಿಂಗ್
ಚೀನಾದ ಜಿಲಿನ್ ಪ್ರಾಂತ್ಯದ ಲಾಂಗ್ಜಿಪುನ ಕಲ್ಲಿದ್ದಲು ಗಣಿಯೊಂದರಲ್ಲಿ ಭಾನುವಾರ ತಡರಾತ್ರಿ ಬಂಡೆಗಲ್ಲು ಸ್ಫೋಟಗೊಂಡ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟು 10 ಜನರು ಗಾಯಗೊಂಡಿದ್ದಾರೆ.
ಭಾನುವಾರ ಸ್ಥಳೀಯ ಕಾಲಮಾನ 20.00ಕ್ಕೆ ಕಲ್ಲಿದ್ದಲು ಗಣಿಯಲ್ಲಿ ಬಂಡೆಗಲ್ಲು ಸ್ಫೋಟಗೊಂಡು 9 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದಿಂದ 2.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.