ಉದ್ಯಮಿ ಮೇಲೆ ಗುಂಡು ಹಾರಿಸಿದ ಪ್ರಕರಣ ಸಂಬಂಧ ಮೂವರ ಬಂಧನ

ಬೆಂಗಳೂರು

        ಎಚ್‍ಬಿಆರ್ ಲೇಔಟ್‍ನ ಮನೆಯ ಬಳಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸೈಯದ್ ಜುಬೀರ್ ಮೇಲೆ ಗುಂಡುಯ ಹಾರಿಸಿ ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಕೆ.ಜಿ.ಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

        ಆರೋಪಿ ಡೈನಮೈಟ್ ಖಲೀಲ್ ಹಾಗೂ ಆತನ ಇಬ್ಬರು ಸಹಚರರು ಬಂಧಿತ ಆರೋಪಿಗಳಾಗಿದ್ದಾರೆ. ಡೈನಾಮೇಟ್ ಖಲೀಲ್ ಕುಖ್ಯಾತ ರೌಡಿ ಬಾಂಬೆ ಸಲೀಂನ ಸಹಚರನಾಗಿದ್ದು, ಸುಪಾರಿ ಪಡೆದು ಜುಬೀರ್ ಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ .ಕಳೆದ ಮೇ.4 ರಂದು ಕೆ.ಜಿ. ಹಳ್ಳಿಯ ಹೊರವರ್ತುಲ ರಸ್ತೆಯ ಎಚ್‍ಬಿಆರ್ ಲೇಔಟ್ ಬಳಿ ತಲೆಗೆ ಹೆಲ್ಮೆಟ್ ಧರಿಸಿ, ಆಕ್ಟೀವಾದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಬ್ಯಾಗ್ ನೊಳಗಿದ್ದ ಪಿಸ್ತೂಲ್ ತೆಗೆದು ಜುಬೀರ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಯತ್ನ ನಡೆಸಲಾಗಿತ್ತು.

         ದುರ್ಘಟನೆಯಲ್ಲಿ ಜುಬೀರ್ ಹೊಟ್ಟೆಗೆ ಎರಡು ಗುಂಡು ತಗುಲಿತ್ತು. ಗಾಯಾಳು ಉದ್ಯಮಿ ಜುಬೇರ್ ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link