ನಾಗರಹೊಳೆ : ಮೂವರು ಬೇಟೆಗಾರರ ಬಂಧನ

ಮೈಸೂರು

    ನಾಗರ ಹೊಳೆ ರಾಷ್ಟ್ರೀಯ ಉದ್ಯಾನ ಪ್ರವೇಶಿಸಿದ್ದ ಮೂವರು ಶಸ್ತ್ರ ಸಜ್ಜಿತ ಬೇಟೆಗಾರರನ್ನು ರಾಜ್ಯ ಆರಣ್ಯ ಅಧಿಕಾರಿಗಳು, ಚೌಕೋರು ಪ್ರದೇಶದ ದೇವಮಚ್ಚಿಯಲ್ಲಿ ಬುಧವಾರ ಬಂಧಿಸಿದ್ದಾರೆ.ಬಂಧಿತ ಭೇಟೆಗಾರರನ್ನು ವಿರಾಜ ಪೇಟೆಯ ಅಂಬಟ್ಟಿ ಗ್ರಾಮದ ಖಾಲಿದ್, ಶಾಹು ಹಾಗೂ ಝೈದ್ ಎಂದು ಗುರುತಿಸಲಾಗಿದೆ.

   ಬಂಧಿತರಿಂದ 2 ಎಸ್ ಬಿ ಆರ್ ಎಲ್ ಬಂದೂಕುಗಳು, 8 ಸಜೀವ ಗುಂಡುಗಳು, 2 ಪ್ಲಾಸ್ಟಿಕ್ ಕವರ್ ಗಳು, ಟಾರ್ಚ್ ಹಾಗೂ ಮೂರು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತರು ಕಾರಿನ ಮೂಲಕ ಆಗಮಿಸಿ, ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಮಾರಾಟ ಮಾಡಲು ಆರಣ್ಯ ಪ್ರವೇಶಿಸಲು ಯತ್ನಿಸುತ್ತಿದ್ದರು ಎಂದು ಆರಣ್ಯ ಸಂರಕ್ಷಣಾಧಿಕಾರಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link