ಮಂಗಳೂರು
ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಶ್ರೀಮತಿ ಶೈಲಜಾ ಕೋಟೆ ರವರ ನಿರ್ದೇಶನದಂತೆ ಅಬಕಾರಿ ಅಧೀಕ್ಷಕರು ವಿನೋದ್ ಕುಮಾರ್ ರವರ ನೇತೃತ್ವದಲ್ಲಿ ಮಂಗಳೂರು ಉಪ ವಿಭಾಗ-1 ರ ಅಬಕಾರಿ ಉಪ ಅಧೀಕ್ಷಕರು ಶಿವಪ್ರಸಾದ್ ಮಾರ್ಗದರ್ಶನದಂತೆ ಉಪ ವಿಭಾಗ-1ರ ಎಲ್ಲಾ ಅಬಕಾರಿ ನಿರೀಕ್ಷಕರು,ಉಪ-ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಇನೊಲಿ ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಸಾಮೂಹಿಕ ಅಬಕಾರಿ ದಾಳಿ ನಡೆಸಲಾಗಿ ಪಜಿಲ ಎಂಬಲ್ಲಿನ ಹೊಳೆ ಬದಿಯಲ್ಲಿ ಎರಡು ಬ್ಯಾರೇಲ್ಗಳಲ್ಲಿ ಭಟ್ಟಿ ಸಾರಾಯಿ ತಯಾರಿಕೆ ಗಾಗಿ ದಾಸ್ತಾನಿಸಿರುವ 400 ಲೀಟರ್ ಗಳಷ್ಟು ಹುಳಿ ರಸವನ್ನು ಪತ್ತೆಹಚ್ಚಲಾಗಿದೆ.ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಮಂಗಳೂರು ದಕ್ಷಿಣ ವಲಯ ದ ಅಬಕಾರಿ ನಿರೀಕ್ಷಕರು ರತ್ನಾಕರ್ ರೈ ರವರು ನಡೆಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








