ಬೆಂಗಳೂರು
ಟೋಲ್ ಹಣ ಪಾವತಿಸುವಂತೆ ಕೇಳಿದ ಸಿಬ್ಬಂದಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ ಐವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂನ ಕಪ್ಪಲ್ಲೂರು ಟೋಲ್ ಬಳಿ ಟೋಲ್ ಹಣ ಪಾವತಿಸಲು ನಿರಾಕರಿಸಿ ಪಿಸ್ತೂಲಿನಿಂದ ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಟೋಲ್ ಸಿಬ್ಬಂದಿ ಬೆದರಿಸಿದ ಐವರು ಪೊಲೀಸರ ಅತಿಥಿಯಾಗಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ಕಾರಿನಲ್ಲಿ ಒಟ್ಟು ಐವರು ಪ್ರಯಾಣ ಮಾಡುತ್ತಿದ್ದರು. ಐವರಲ್ಲಿ 25 ವರ್ಷದ ವ್ಯಕ್ತಿ ಪಿಸ್ತೂಲು ತೋರಿಸಿ ಸಿಬ್ಬಂದಿಯನ್ನು ಹೆದರಿಸಿದ್ದಾನೆ ಹಾಗೂ ಟೋಲ್ ಹಣ ಪಾವತಿಸಲು ಸೂಚಿಸಿದ ಸಿಬ್ಬಂದಿಗೆ ಕಾರಿನಿಂದ ಕೆಳಗಿಳಿದು, ಪಿಸ್ತೂಲು ತೋರಿಸಿದ್ದಾನೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ್ದಾನೆ.ನಂತರ ಟೋಲ್ ಸಿಬ್ಬಂದಿ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣ ಕಾರನ್ನು ಹಿಂಬಾಲಿಸಿದ ಇಂಟರ್‍ಸೆಪ್ಟಾರ್ ಪೊಲೀಸರು ಈ ಐವರಿದ್ದ ಕಾರನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅವರನ್ನು ಬಂಧಿಸಿ ಅವರ ಬಳಿ ಇದ್ದ ಪಿಸ್ತೂಲು, ಫೋನ್, ಹಣ ಹಾಗೂ ಅವರ ಪ್ರಯಾಣಿಸುತ್ತಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ