ಬೆಂಗಳೂರು
ರಾಜಕೀಯ ಮುಖಂಡರ ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಧಿಸಿದAತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ಅಧಿಕಾರಿಗಳು ರಾಜ್ಯದ 54 ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.
ನಗರ ಸೇರಿದಂತೆ ರಾಜ್ಯದ 54 ಇನ್ಸ್ ಪೆಕ್ಟರ್ ಗಳಿಗೆ ಸೋಮವಾರದಿಂದ ಎರಡು ದಿನಗಳ ಕಾಲ ವಿಚಾರಣೆಗೆ ಸೂಚನೆ ನೀಡಲಾಗಿದೆ.ವಿವಿಧ ಅಪರಾಧ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಾಗಿ ಪೊಲೀಸ್ ಇನ್ಸ್ ಪೆಕ್ಟರ್ ಗಳು ಜವಾಬ್ದಾರಿ ವಹಿಸಲಾಗಿದ್ದು,ತನಿಖೆ ವೇಳೆ ಕೆಲವರು ಪೊಲೀಸ್ ಕದ್ದಾಲಿಕೆ ನಡೆಸಿದ್ದಾರೆ. ಈ ಹಿನ್ನೆಲೆ ಸಿಬಿಐ ಇನ್ಸ್ ಪೆಕ್ಟರ್ ಗಳಿಂದ ವಿವರಣೆ ಪಡೆಯಲು ಮುಂದಾಗಿದೆ.
ತನಿಖೆ ನಡೆಸಿದ ಪ್ರಕರಣಗಳಲ್ಲಿ ಯಾವ ಕಾರಣಕ್ಕೆ ಕದ್ದಾಲಿಕೆ ಮಾಡಲಾಗಿತ್ತು ಆ ಪ್ರಕರಣದಲ್ಲಿ ಕದ್ದಾಲಿಕೆಗೆ ಒಳಗಾದ ವ್ಯಕ್ತಿಯ ಪಾತ್ರವೇನು? ಕದ್ದಾಲಿಕೆ ಬಳಿಕ ಆ ವ್ಯಕ್ತಿ ಮೇಲೆ ಕೈಗೊಂಡ ಕ್ರಮವೇನು ಸೇರಿದಂತೆ ಹಲವು ಪ್ರಶ್ನೆಗಳಿಗೆ ಸಿಬಿಐ ಪೊಲೀಸರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








