ಹಗರಿಬೊಮ್ಮನಹಳ್ಳಿ:
ಪಟ್ಟಣದ ಶ್ರೀರೇಣುಕಾ ಪ.ಪೂ.ಕಾಲೇಜ್‍ಗೆ 6ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಹಸನ್‍ಭಾಷ 600ಕ್ಕೆ 530ಅಂಕಗಳನ್ನು (ಶೇ.89)ಪಡೆದು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದರೆ, ಸೌಮ್ಯ ಎಸ್.ಎಂ 492 ಅಂಕಗಳನ್ನು (ಶೇ.82)ಪಡೆದು ದ್ವಿತೀತ ಸ್ಥಾನದಲ್ಲಿದ್ದಾರೆ. ಅದರಂತೆ ಸರ್ವಮಂಗಳ 476ಅಂಕಗಳನ್ನು (ಶೇ.80)ರಷ್ಟು ಪಡೆದು ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯವಿಭಾಗದಲ್ಲಿ 600ಕ್ಕೆ 584 ಅಂಕಗಳನ್ನು(ಶೇ.97.3) ಪಡೆದು ಡಿಸ್ಟಿಂಕ್ಷನಲ್ಲಿ ಹಾಗೂ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಯು.ಮಂಜುನಾಥ 554 ಅಂಕಗಳನ್ನು (ಶೇ.92) ಪಡೆದು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಹೊಂದಿದ್ದಾರೆ.
ಕಲಾವಿಭಾಗದಲ್ಲಿ ರಮೇಶ್‍ನಾಯ್ಕ 600ಕ್ಕೆ 555 ಅಂಕಗಳನ್ನು (ಶೇ.92.5) ಪಡೆದಿದ್ದಾರೆ. ಅದರಂತೆ ಬಸವರಾಜ್ ಮಗ್ಗಿ 542 ಅಂಕಗಳನ್ನು (ಶೇ.90.33)ಪಡೆದಿದ್ದು ಎಂ.ಮಲ್ಲೇಶ್ (ಶೇ.86)ರಷ್ಟು ಫಲಿತಾಂಶ ಪಡೆಯುವ ಮೂಲಕ ಇವರೆಲ್ಲ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿ ಕಾಲೇಜ್‍ಗೂ ಹಾಗೂ ಪಾಲಕರಿಗೂ ಕಿರ್ತಿತರುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಕೆ.ಎಂ.ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಇಂದುಮತಿ ತಿಪ್ಪೇಸ್ವಾಮಿ ಮತ್ತು ಆಡಳಿತವರ್ಗ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ