ಗವಾಯಿಗಳವರ 8 ನೇ ವರ್ಷದ ಪುಣ್ಯ ಸ್ಮರಣೋತ್ಸವ

ಶಿಗ್ಗಾವಿ :

     ಸಂತೆ ಮೈಧಾನದಲ್ಲಿರುವ ಶರೀಫ ಭವನದ ಪಕ್ಕದಲ್ಲಿಯೇ ಪುಟ್ಟರಾಜ ಕವಿ ಗವಾಯಿಗಳವರ ಸಂಘಕ್ಕೆ ಬಯಲು ರಂಗ ಮಂದಿರ ನಿರ್ಮಿಸಲು ಜಾಗ ನೀಡುವುದು ಸೇರಿದಂತೆ ಆಫೀಸ್ ಮತ್ತು ಕ್ಲಾಸ್‍ರೂಮ್ ಕೊಠಡಿಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಡಲಾಗುವುದೆಂದು ಶಾಸಕ ಬಸವರಾಜ ಬೊಮ್ಮಾಯಿ ಬರವಸೆ ನೀಡಿದರು.

      ಪಟ್ಟಣದ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳವರ ಕಲಾ ಸಂಸ್ಥೆ ಶಿಗ್ಗಾವಿ ಹಾಗೂ ಜನ್ನಡ ಮತ್ತು ಸಂಸ್ಕತಿ ಇಲಾಖೆ ಹಾವೇರಿ ಇವರ ಸಹಯೋಗದಲ್ಲಿ ಲಿಂ. ಪಂ ಪುಟ್ಟರಾಜ ಕವಿ ಗವಾಯಿಗಳವರ 8 ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಲಾ ಪ್ರೀತಿಯಿಂದ ಹುಟ್ಟಿರುವ ಸಂಸ್ಥೆ ಶಿಗ್ಗಾವಿ ಪಂಡಿತ್ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯಾಗಿದ್ದು ಅದರ ಜೊತೆಗೆ ಸದಾ ನಾ ಇದ್ದೇನೆ ಅದರ ಜೊತೆಗೆ ಸಂಸ್ಥೆಗೆ ಅಡಿಟೋರಿಯಂ ಸಿತ ಅವಶ್ಯವಾಗಿ ಬೇಕಾಗುತ್ತದೆ ಅದನ್ನೂ ಸಹಿತ ಮಾಡಿಕೊಡಲಾಗುವುದು.

     ಪುಟ್ಟರಾಜರು ಏನನ್ನೂ ಚಿಂತನೆ ಮಾಡದೇ ಬದಲಾವಣೆ ತಂದವರು, ಆದ್ಯಾತ್ಮಿಕ ಸಂಗೀತದ ಸರಸ್ವತಿ ಪುತ್ರರಾಗಿದ್ದರು, ಪಂಡಿತ ಪುಟ್ಟರಾಜ ಗವಾಯಿಗಳು ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ವಾತಾವರಣವನ್ನು ನೀಡಿದವರಾಗಿದ್ದರು ಎಂದ ಶಾಸಕರು ಅವರ ವಿಧಾಯದ ಸಮಯದಲ್ಲಿ ಸತತ 24 ತಾಸಿಗೂ ಹೆಚ್ಚು ಘಂಟೆಗಳ ಕಾಲ ಅವರೋಟ್ಟಿಗಿದ್ದ ಸಮಯವನ್ನು ಮೆಲುಕು ಹಾಕುವ ಮೂಲಕ ಅವರ ಅಗಾಧ ಅಂತರಾತ್ಮದ ಶಕ್ತಿಯನ್ನು ವಿವರಿಸಿದರು.

      ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಪುಟ್ಟರಾಜ ಗವಾಯಿಗಳವರ 1008 ನೇ ತುಲಾಭಾರವನ್ನು ಮಾಡಿದ ಪುಣ್ಯ ನನಗೆ ದೊರಕಿದ್ದು ನನ್ನ ಪೂರ್ವಜನ್ಮದ ಪುಣ್ಯ, ಗವಾಯಿಗಳಿಗೆ ರುದ್ರಾಕ್ಷಿ ಸರ ನೀಡಿ ಸನ್ಮಾನಿಸಿದ ಘಳಿಗೆಯನ್ನು ಸ್ಮರಿಸಿದ ಮಂಜುನಾಥ ಕುನ್ನೂರ ಅವರು ಕಾರ್ಯಕ್ರಮ ಆಯೋಜಿಸಿದ ಸಂಸ್ಥೆಯ ಅದ್ಯಕ್ಷರು ಸೇರಿದಂತೆ ಸರ್ವಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಪುಟ್ಟರಾಜರ ಬಯಲು ರಂಗಮಂದಿರಕ್ಕೆ ವಯಕ್ತಿಕ ಒಂದು ಲಕ್ಷಗಳ ಹಣ ನೀಡುವುದಾಗಿ ತಿಳಿಸಿದರು.

     ಭರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸಂಗೀತ ಮತ್ತು ಸಂಸ್ಕøತಿಗೆ ಈ ಕಾರ್ಯಕ್ರಮ ಸಾಕ್ಷೀಯಾಗಿದ್ದು ರಂಗಮಂದಿರಕ್ಕೆ ವಯಕ್ತಿಕವಾಗಿ ದುಡಿದ ಹಣದಲ್ಲಿ 2 ಲಕ್ಷ ರೂಗಳನ್ನು ನೀಡುತ್ತೇನೆ ಮತ್ತು ತಾಲೂಕಿನ ಉತ್ತಮ ಕಲಾ ಸೇವೆಗೈದವರಿಗೆ ಮುಂದಿನದಿನಗಳಲ್ಲಿ ಭರತ ಸೇವಾ ಸಂಸ್ಥೆ ಆಶ್ರಯದಲ್ಲಿ 10 ಸಾವಿರ ರೂಗಳ ಧನ ಸಹಾಯದೊಂದಿಗೆ ಸನ್ಮಾನಿಸಲಾಗುವುದು ಎಂದು ಘೋಶಿಸಿದರು.

    ಮಾಜಿ ತಾಪಂ ಉಪಾದ್ಯಕ್ಷ ಕೇದಾರೆಪ್ಪ ಬಗಾಡೆ ಒಂದು ಲಕ್ಷರೂಗಳನ್ನು ಹಾಗೂ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ (ಕುನ್ನೂರ) ವಯಕ್ತಿಕವಾಗಿ ದುಡಿದ ಹಣದಲ್ಲಿ 10 ಸಾವಿರು ರೂಗಳನ್ನು ರಂಗಮಂದಿರದ ಕಟ್ಟಡಕ್ಕೆ ನೀಡುವುದಾಗಿ ಹೇಳಿದರು,
ಧಾರವಾಡದ ಉಪನ್ಯಾಸಕರಾದ ಪ್ರೋ ಪ್ರಜ್ಞಾ ಮತ್ತಿಹಳ್ಳಿ ಉಪನ್ಯಾಸ ನೀಡಿದರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿಧರನ್ನು ಹಾಗೂ ಮಹನೀಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

      ಕಾರ್ಯಕ್ರಮದ ನಂತರ ಕಲಾವಿಧ ಬಸವರಾಜ ಶಿಗ್ಗಾವಿ ನಿರ್ದೇಶನ ಮತ್ತು ಸಂಗೀತದ ಶಿಗ್ಗಾವಿ ವಚನ ನಿಧಿ ವನಿತಾ ಸಂಘದ ಮಹಿಳಾ ಮಣಿಗಳಿಂದ ದೊಡ್ಡಾಟ ರೂಪದಲ್ಲಿ ಮೂಡಿ ಬಂದ ಸ್ತ್ರೀ ಕುಣಿತದ ವಚನಗಳ ನೃತ್ಯ ರೂಪಕವು ನೋಡುಗರನ್ನು ರಂಜಿಸಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುರಸಭೆ ಅದ್ಯಕ್ಷ ಶಿವಪ್ರಸಾದ ಸುರಗೀಮಠ ವಹಿಸಿದ್ದರು, ಸಾನಿದ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿ ಅಶೀರ್ವಚಿಸಿದರು, ಶ್ರೀ ಗಾ.ಪಂ.ಪು.ಗ ಕಲಾ ಸಂಸ್ಥೆಯ ಅದ್ಯಕ್ಷ ಫಕ್ಕೀರೇಶ ಮಾಸ್ತರ್ ಕೊಂಡಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶ್ರೀ ಗಾ.ಪಂ.ಪು.ಗ ಕಲಾ ಸಂಸ್ಥೆಯ ಗೌರವಅದ್ಯಕ್ಷರಾದ ಕೆ ಕೊಟ್ರೇಶ್ ಮಾಸ್ತರ್ ಬೆಳಗಲಿ, ನಾಗರಾಜ ದ್ಯಾಮನಕೊಪ್ಪ, ಸಾಹಿತಿ ಬ ಫ ಯಲಿಗಾರ, ಎಸ್ ವಿ ದೇಶಪಾಂಡೆ, ತಿಪ್ಪಣ್ಣ ಸಾತಣ್ಣವರ, ನರಗುಂದ ಮಾಸ್ತರ್, ಸಿ ಡಿ ಯತ್ನಳ್ಳಿ, ಸುಶೀಲಕ್ಕ ಪಾಟೀಲ, ಅನಿತಾ ಗೊಬ್ಬರಗುಂಪಿ, ವಿಜಯಲಕ್ಷ್ಮಿ ಹೆಸರೂರ ಸೇರಿದಂತೆ ತಾಲೂಕಿನ ಕಲಾವಿಧರು ಹಾಗೂ ಕಲಾಭಿಮಾನಿಗಳು ಹಾಜರಿದ್ದರು, ಪ್ರೋ ಶಿವಪ್ರಕಾಶ ಬಳಿಗಾರ ನಿರೂಪಿಸಿದರು, ಶಿಕ್ಷಕ ಎಂ ಬಿ ಹಳೆಮನಿ ಸ್ವಾಗತಿಸಿದರು, ಎ ಎಫ್ ಹೊಸಮನಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link