ದಾವಣಗೆರೆ :
ವಿದ್ಯೆಯೇ ಸಂಪತ್ತಾಗಿದ್ದು, ಶೈಕ್ಷಣಿಕ ಸಾಧನೆ ಪ್ರತಿಯೊಬ್ಬರ ಗುರಿಯಾಗಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ತಿಳಿಸಿದರು.
ಸಮೀಪದ ಹೊಸ ಕುಂದವಾಡ ಗ್ರಾಮದ ಶ್ರೀರಾಮ ಕಾನ್ವೆಂಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ವಾರ್ಷಿಕೋತ್ಸವಗಳು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದರು.
ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಠ್ಯಕ್ಕೆ ಸಂಬಂಧಿಸಿದ ಕೆಲ ತಿಳುವಳಿಕೆ ಹೇಳಿಕೊಡುವುದರ ಜತೆಗೆ ನೀತಿ ಕಥೆಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಹಿರಿಮೆ-ಗರಿಮೆ ಎತ್ತಿಹಿಡಿಯುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಆಗ ಮಕ್ಕಳಿಗೆ ಪ್ರಾಯೋಗಿಕ ಅರಿವು ಮೂಡಲಿದೆ ಎಂದರು.
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯವಾಗಿದೆ. ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶ್ರೀರಾಮ ಕಾನ್ವೆಂಟ್ ಉತ್ಸುಕವಾಗಿದೆ. ಹೊಸ ಕುಂದವಾಡ ಮತ್ತು ಸುತ್ತಮುತ್ತ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದರು.ಬೆಂಗಳೂರಿನ ವಿಶ್ವ ಚೇತನ ಪಿಯು ಕಾಲೇಜಿನ ಉಪನ್ಯಾಸಕ ಎ.ಬೀರಪ್ಪ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀರಾಮ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಬಿ.ಶಶಿಧರಯ್ಯ, ಪಠ್ಯದ ಜೊತೆಗೆ ಪಠೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಸಾಧ್ಯವಾಗಲಿದೆ. ಪೋಷಕರು ಮಕ್ಕಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಬಿ.ಚಿದಾನಂದ ಗುರು, ರವಿ ಪ್ರಕಾಶ್, ಶ್ರೀರಾಮನಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಶಿವಲಿಂಗಪ್ಪ, ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯಿನಿ ಹೆಚ್.ಬಿ.ಮಮತ, ಸಿದ್ದಪ್ಪ, ಪುನೀತ್, ಕ್ಯತರಪ ತಿಪ್ಪೇಶ್, ಮಲ್ಲಿಕಾರ್ಜುನ್ ಬೋಧಕ ಬೋಧಕೇತರರ ವರ್ಗ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
