ಅಖಂಡ ರಾಮ ನಾಮಸ್ಮರಣೆ ಜಪ ಸಮಾಪ್ತಿ.

ಹೊಸಪೇಟೆ :

           ಇಲ್ಲಿನ ರಾಣಿಪೇಟೆಯ ಬಯಲು ಆಂಜನೇಯ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ಆಶ್ರಯದಲ್ಲಿ ಅಖಂಡ ಶ್ರೀರಾಮ ಜಪಯಜ್ಞ ಅಂಗವಾಗಿ ಶ್ರೀರಾಮ ತಾರಕ ಮಂತ್ರ ಭಜನೆ ಆಯೋಜಿಸಲಾಗಿತ್ತು.

           ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದೇವಾಲಯ ಹಾಗು ಹನುಮಾನ್ ಮಾಲಾಧಾರಿಗಳ ವ್ರತ ಒಳ್ಳೆಯ ರೀತಿಯಿಂದ ಸಮಾಪ್ತಿಯಾಗಲಿ ಎಂಬ ಉದ್ದೇಶದಿಂದ 24 ಗಂಟೆಗಳ ಕಾಲ ಬಯಲು ಆಂಜನೇಯ ದೇವಸ್ಥಾನದಲ್ಲಿ ಹೋಮ ಹಾಗು ಅಖಂಡ ರಾಮ ನಾಮಸ್ಮರಣೆ ಜಪ ಸಮಾಪ್ತಿಗೊಂಡಿತು.

          ಅಖಂಡ ಭಜನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗು ಮಹಿಳಾ ಮಂಡಳಿಗಳು ಸೇರಿದಂತೆ ಸುಮಾರು 170ಕ್ಕೂ ಹೆಚ್ಚು ಭಜನಾ ಮಂಡಳಿಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ವಿದೇಶಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂಧರ್ಭದಲ್ಲಿ ವಿಶ್ವ ಹಿಂದು ಪರಿಷತ್‍ನ ವಿಜಯಲಕ್ಷ್ಮಿ ಹಿರೇಮಠ, ಮುಖಂಡರಾದ ನರಸಿಂಹಮೂರ್ತಿ, ಆನಂದಕೃಷ್ಣ, ಅನಂತ ಪಧ್ಮನಾಭ, ಅನಿಲ್ ಜೋಶಿ, ಗುದ್ಲಿ ಪರಶುರಾಮ, ನಗರಸಭಾ ಸದಸ್ಯರಾದ ಚಂದ್ರಕಾಂತ ಕಾಮತ್, ರೂಪೇಶಕುಮಾರ್ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link