ಹರಪನಹಳ್ಳಿ:
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ದ ಮುಖಂಡನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ತಾಲ್ಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ನೂರಾರು ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಎಐಕೆಎಸ್ ಮುಖಂಡ ಬಳಿಗನೂರು ಮಲ್ಲೇಶ್ ಮೇಲೆ `ಬೇರೆ ಗ್ರಾಮದವರಾಗಿ ಇಲ್ಲಿ ಕೆಲಸ ಕೇಳಲು ಬರುತ್ತಿಯಾ?’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾಮದ ಐದಾರು ಜನ ವ್ಯಕ್ತಿಗಳು ಹಲ್ಲೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಗುಡಿಹಳ್ಳಿ ಹಾಲೇಶ್, ಎಚ್.ಎಂ.ಸಂತೋಷ, ರಮೇಶ್ ನಾಯ್, ಕೆ.ಭರಮಪ್ಪ, ಮೆಹಬೂಬ್ ಬಾಷಾ, ಮತ್ತಿಹಳ್ಳಿ ಕೆಂಚಣ್ಣ, ತಿಂದಪ್ಪ, ನ್ಯಾಯವಾದಿ ಜಾತಪ್ಪ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
