ಬೆಂಗಳೂರು:
ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣ ಕುರಿತು ಶಾಸಕ ಆರ್. ಅಶೋಕ್ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‍ಐಆರ್‍ಗೆ ರಾಜ್ಯ ಹೈಕೋರ್ಟ್ ಐದು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.
ನಿನ್ನೆಯಷ್ಟೇ ಅರ್ಜಿಯನ್ನು ವಜಾಗೊಳಿಸಿ ತನಿಖೆ ನಡೆಸಲು ಹಸಿರು ನಿಶಾನೆ ತೋರಿದ್ದ ಹೈಕೋರ್ಟ್. ಇಂದು ಅಶೋಕ್ ಪರ ವಕೀಲರು ಹಾಜರಾಗಿ, ನಿನ್ನೆ ನೀಡಿದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು.ಇದನ್ನು ಮನ್ಯ ಮಾಡಿದ ನ್ಯಾಯಾಮೂರ್ತಿ ಬೂಧಿಹಾಳ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.
ಅಶೋಕ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಹೊರವಲಯದ ಸೋಮನಹಳ್ಳಿ ಸುಮಾರು 8 ಎಕರೆ ಬಗರ್‍ಹುಕುಂ ಜಮೀನುನ್ನು ಕಾನೂನು ಬಾಹಿರವಾಗಿ ಮಂಜೂರಾತಿ ಮಾಡಿದ್ದರು. ಅಶೋಕ್ ಅವರು ಆಗ ಭೂಪರಿವರ್ತನಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ