ಶಿಕ್ಷಕರೇ ತಪ್ಪು ಮಾಡಿದರೂ ಧೈರ್ಯದಿಂದ ಪ್ರಶ್ನಿಸಿ

0
16

ಹುಳಿಯಾರು:

      ಶಿಕ್ಷಕರನ್ನು ಅಂಧ ಭಕ್ತಿಯಿಂದ ಗೌರವಿಸುವುದನ್ನು ಬಿಟ್ಟು ತಪ್ಪು ಮಾಡಿದರೂ ಧೈರ್ಯದಿಂದ ಪ್ರಶ್ನಿಸುವ ಗುಣ ಬೆಳಸಿಕೊಳ್ಳಿ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ಕಿವಿ ಮಾತು ಹೇಳಿದರು.

      ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ಪತ್ರಿಕೆಯಾದ ತಲೆಮಾರು ಸಂಚಿಕೆ 4 ಬಿಡುಗಡೆ ಮಾಡಿ ಅವರು ಮಾತನಾಡಿದರು.

       ವಿದ್ಯಾರ್ಥಿಗಳು ಗುರುಗಳನ್ನು ಮೀರಿ ಬೆಳೆಯುವ ಗುರಿ ಮತ್ತು ಛಲ ಬೆಳಸಿಕೊಳ್ಳಬೇಕು. ತನ್ನ ಗುರುಗಳಿಗೆ ತನ್ನ ಸಾಧನೆಯೇ ಗುರುದಕ್ಷಿಣೆ ಎನ್ನುವಂತೆ ಬೆಳೆಯಬೇಕು. ಹಾಗಾಗಿ ಪದವಿ ವ್ಯಾಸಂಗದ ನಂತರ ಐಎಎಸ್, ಕೆಎಎಸ್ ಓದಿ ಉತ್ತಮ ಸಾಧನೆ ಮಾಡಬೇಕು. ಸಾಮಾಜಿಕ, ಸಾಹಿತ್ಯ, ಕ್ರೀಡೆ, ಸಂಗೀತ ಹೀಗೆ ಯಾವುದಾದರೊಂದು ಕ್ಷೇತ್ರದಲ್ಲಿ ಎಲ್ಲರೂ ಗುರುತಿಸುವ ಕೀರ್ತಿ ಸಂಪಾದಿಸಬೇಕು ಎಂದು ಸಲಹೆ ನೀಡಿದರು.

      ಇಂದು ಒಂದೆರಡು ಸಾವಿರ ಎಸ್‍ಡಿಎ, ಎಫ್‍ಡಿಎ ಉದ್ಯೋಗಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುವಷ್ಟರ ಮಟ್ಟಿಗೆ ಸ್ಪರ್ಧೆ ಕಠಿಣವಾಗಿದೆ. ಜಾಗತೀಕ ತಾಪಮಾನದಿಂದ ಕೆಲವೇ ವರ್ಷಗಳಲ್ಲಿ ಭೂಮಿ ಮೇಲೆ ಬದುಕುವುದೂ ದತ್ಸರವಾಗುತ್ತದೆ. ಈ ಎರಡೂ ಸವಾಲುಗಳಿ ಇಂದು ಯುವ ಜನತೆ ಮುಮದಿದ್ದು ಎಚ್ಚರಿಕೆಯ ಹೆಚ್ಚೆ ಇಡಬೇಕಿದೆ ಎಂದರಲ್ಲದೆ, ಎಲ್ಲದರ ಬಗ್ಗೆಯೂ ಅರೆ ತಿಳುವಳಿಗೆ ಪಡೆಯುವುದಕ್ಕಿಂತ ಯಾವುದಾದರೊಂರದಲ್ಲಿ ಪಕ್ವತೆ ಪಡೆದುಕೊಳ್ಳಬೇಕು ಎಂದು ಹೇಳಿದರು.

       ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಚಿಕೆಯ ಸಂಪಾದಕ ಆರ್.ವಲಿ, ಲಂಚ ಮುಕ್ತ ವೇದಿಕೆಯ ತಾಲೂಕು ಅಧ್ಯಕ್ಷ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ಕಾಲೇಜು ನಿವೇಶನ ದಾನಿಗಳಾದ ಬ್ಯಾಂಕ್ ಮರುಳಸಿದ್ಧಪ್ಪ, ನಿವೃತ್ತ ಉಪನ್ಯಾಸಕ ತ.ಶಿ.ಬಸವಮೂರ್ತಿ, ಕಾಡಸಿದ್ದೇನಹಳ್ಳಿ ಸತೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಎಲ್.ಆರ್.ಬಾಲಾಜಿ, ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

LEAVE A REPLY

Please enter your comment!
Please enter your name here