ಕೊರಟಗೆರೆ ಯಲ್ಲಿ ರೈತ ದಂಪತಿ ಕಣ್ಣು ಕಿತ್ತ ಕರಡಿ !!

ತೋವಿನಕೆರೆ

        ತೋವಿನಕೆರೆ ಸಮೀಪದ ಸೂರೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಕರಡಿ ದಾಳಿ ಮಾಡಿದ್ದು ಮೂರು ಜನರಿಗೆ ಕಚ್ಚಿ ಆ ಊರಿನ ಹೊಲಗಳಲ್ಲಿ ಬೀಡು ಬಿಟ್ಟಿದೇ ಎಂದು ತಿಳಿದು ಬಂದಿದೆ ಇದಕ್ಕು ಮುನ್ನ ಹೊಲಕ್ಕೆ ಕೆಲಸಕ್ಕಂದು ಹೋದ  ರೇಣಿಕಮ್ಮ,ಕರೀಂ ಸಾಬ್ ಮತ್ತು ಬೇದುರ್ ಬೀ ಎಂಬ ಮೂವರಿಗೆ ಕಚ್ಚಿ ಮರೆಯಾಗಿತ್ತು ಆದರೆ ಆ ಕರಡಿ ಅಲ್ಲೇ ಹೊಲಗಳಲ್ಲಿ ಓಡಾಡುವುದನ್ನು ನೊಡಿದ ಜನ ಕರಡಿ ಹಿಡಿಯಲು ಬಾರದ ಅರಣ್ಯ ಇಲಾಖಾ ಸಿಬ್ಬಂದಿ ವಿರುದ್ದ ಆಕ್ರೋಶಗೊಂಡಿದ್ದಾರೆ ಎಂದು ತಿಳಿದುಬಂದಿದೆ.

      ಜಿಲ್ಲೆಯಲ್ಲಿರುವ ಕರಡಿಧಾಮದ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಇದರಿಂದಾಗಿ ಸ್ಥಳಿಯರ ಆಕ್ರೋಶ ಮುಗಿಲು ಮುಟ್ಟಿದೆ ಇನ್ನೂ ಕರಡಿಯಿಂದ ಕಡಿಸಿಕೊಂಡವರನ್ನು ನೋಡಲು ಜನತೆ ಮುಗಿಬಿದಿದ್ದಾರೆ ದಾಳಿಗೊಳಗಾದವರಿಗೆ ಸಮೀಪದ  ತೋವಿನಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಗುತ್ತಿದೆ ಎಂದು ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link