ಖತರ್ನಾಕ್ ಬೈಕ್ ಕಳ್ಳರ ಬಂಧನ ..!!

ಬೆಂಗಳೂರು

    ನಕಲಿ ಕೀ ಬಳಸಿ ಬೈಕ್ ಕಳವು ಮಾಡುತ್ತಿದ್ದ ಬಿಕಾಂ ಪದವಿಧರ ಸೇರಿ ಇಬ್ಬರನ್ನು ಸಿಸಿ ಕ್ಯಾಮಾರದಲ್ಲಿ ಸೆರೆಯಾದ ದೃಶ್ಯವನ್ನು ಆಧರಿಸಿ ಬಂಧಿಸಿರುವ ತಿಲಕ್‍ನಗರ ಪೊಲೀಸರು 7 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

    ತಿಲಕ್ ನಗರದ ಮಹಮದ್ ನಿಹಾಲ್ (26), ಬೈರಸಂದ್ರದ ಮಹಮದ್ ಇಸಾಕ್ (31) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 7 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.

     ಆರೋಪಿಗಳ ಬಂಧನದಿಂದ ಸುದ್ದಗುಂಟೆಪಾಳ್ಯದ 5, ಅಶೋಕ್ ನಗರ, ಹುಳಿಮಾವು, ಬ್ಯಾಟರಾಯನಪುರ, ಕಮರ್ಷಿಯಲ್ ಸ್ಟ್ರೀಟ್, ಸಿದ್ದಾಪುರ, ವಿಲ್ಸನ್ ಗಾರ್ಡನ್‍ನ ತಲಾ ಒಂದು ಸೇರಿದಂತೆ, 14 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ಮೋಜು ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.

     ಟಿವಿ ವಾಹಿನಿಯೊಂದರಲ್ಲಿ ಆರೋಪಿಗಳು ಬೈಕ್ ಕಳವು ಮಾಡಿದ ಸಿಸಿಟಿವಿ ದೃಶ್ಯ ಪ್ರಸಾರವಾಗಿದ್ದನ್ನು ಆಧರಿಸಿ, ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ