ಹಾವೇರಿ
17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು 6,83,660 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಅವರಿಂದ 1,40,882 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಡಿ.ಆರ್.ಪಾಟೀಲ(ಕಾಂಗ್ರೆಸ್) ಅವರು 5,42,778, ಅಯೂಬಖಾನ್ ಪಠಾಣ(ಬಹುಜನ ಸಮಾಜ ಪಾರ್ಟಿ), 7479 ಮತಗಳು, ಈಶ್ವರ ಪಾಟೀಲ(ಉತ್ತಮ ಪ್ರಜಾಕೀಯ ಪಾರ್ಟಿ) 7024 ಮತಗಳು, ಶೈಲೇಶ ನಾಜರೆ ಅಶೋಕ(ಇಂಡಿಯನ್ ಲೇಬರ ಪಾರ್ಟಿ (ಅಂಬೇಡ್ಕರ ಪುಲೆ)) 1244ಮತಗಳು, ಬಸವರಾಜ ಎಸ್.ದೇಸಾಯಿ(ಪಕ್ಷೇತರ) 1305, ಬೊಮ್ಮಾಜಿ ರಾಮಪ್ಪ ಸಿದ್ದಪ್ಪ 1389 ಮತಗಳು, ವೀರಭದ್ರಪ್ಪ ವೀರಪ್ಪ ಕಬ್ಬಿಣದ ಉರ್ಫ ಬಂಡಿ 2283 ಮತಗಳು, ಸಿದ್ದಪ್ಪ ಕಲ್ಲಪ್ಪ ಪೂಜಾರ 5858 ಮತಗಳು, ಹನುಮಂಯಪ್ಪ ಡಿ.ಕಬ್ಬಾರ 6247 ಮತಗಳನ್ನು ಪಡೆದಿದ್ದಾರೆ ಹಾಗೂ ನೋಟಾಕ್ಕೆ 7412 ಮತಗಳು ಚಲಾವಣೆಯಾಗಿವೆ.
ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಸತತ ಮೂರನೇ ಬಾರಿಗೆ ಗೆಲವು ಸಾಧಿಸಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ 4,30,293 ಮತಗಳನ್ನು ಪಡೆದು ಪ್ರತಿಸ್ಪರ್ಧಿಗಿಂತ 87,920 ಮತಗಳ ಅಂತರಿಂದ ಗೆಲವು ಸಾಧಿಸಿದ್ದರು, 2014ರ ಲೋಕಸಭಾ ಚುನಾವಣೆಯಲ್ಲಿ 5,66,790 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿಗಿಂತ 87,571 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಭಾರಿ 1,40,882 ಮತಗಳ ಅಂತರದಿಂದ ಗೆಲುವುದರ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ.