ದಾವಣಗೆರೆ
ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಾದಿಭಾಗ್ಯ ಯೋಜನೆ ರದ್ದು ಮಾಡುವ ಮೂಲಕ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರೋಧಿಗಳು ಎಂದು ಸಾಬೀತು ಮಾಡಿದ್ದಾರೆ ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ಅವರು ಕಿಡಿಕಾರಿ ದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಎಂಬುದು ಎಲ್ಲರಿಗೂ ಅನ್ವಯವಾಗು ತ್ತದೆ.ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದರ ಅರ್ಥ ಇದೇನಾ(?).ಒಂದು ಧರ್ಮ ಹೊರಗಿಡು ವುದು ಸಬ್ ಕಾ ಸಾಥ್ ಅಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆಗೆ ಹತ್ತು ಸಾವಿರ ಕೋಟಿ ಅನುದಾನವನ್ನು ದಿಡೀರ್ ಮುಖ್ಯಮಂತ್ರಿ ಅವರು ಪ್ರಕಟಿಸಿದ್ದಾರೆ .ಏಕಾಏಕಿ ಸರ್ಕಾರ ಕ್ಕೆ ಹಣ ಎಲ್ಲಿಂದ ಬಂತು.ಇದೊಂದು ಕೆಟ್ಟ ಆಯವ್ಯಯ.ಬಜೆಟ್ ಮಾಡುವ ರೀತಿನ ಇದೆನಾ ಎಂದು ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ರಾಜ್ಯ ಕೇಳೋದು ತಪ್ಪು,ರಾಜಿನಾಮೆ ಕೊಟ್ಟರೆ ಕೊಡಲಿ.ಸಮಗ್ರ ಕರ್ನಾಟಕ ಒಂದಾಗಬೇಕು.ಅವರು ಬಿಜೆಪಿಯಲ್ಲಿ ಇರೋದು ಸರ್ಕಾರದ ವಿರುದ್ದ ಹೋರಾಟ ಮಾಡಬೇಕು. ರಾಜಿನಾಮೆ ನೀಡುತ್ತೇನೆ ಎಂಬುದು ಪಲಾಯ ನವಾದ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಬಾಯಲ್ಲಿ ಹೇಳಿದ್ರೆ ಆಗದು.ಅದನ್ನು ಮಾಡಿ ತೋರಿಸಬೇಕು. ಬಿಜೆಪಿಯವರು ಡೋಂಗಿಗಳು ಎಂದು ಲೇವಡಿ ಮಾಡಿದರು.
ದೇಶದ್ರೋಹ ಪ್ರಕರಣ ದಾಖಲಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ, ಬಿಜೆಪಿ ಯದ್ದು ಪೂಲೀಸ್ ಸ್ಟೇಟ್ಮೆಂಟ್. ನಾನು ಅಧಿಕಾರದ ಹಿಂದೆ ಹೋದವನಲ್ಲ,ಜನರು ಕೊಟ್ಟರೆ ಕೆಲಸ ಮಾಡುತ್ತೇವೆ ಎಂದರು.
ಸಚಿವರಾಗಲು ಪಕ್ಷ ತೊರೆದು ಹೋದವರು ಪಕ್ಷಕ್ಕೆ ವಾಪಸ್ಸು ಬರುತ್ತಾರಾ(?) ಎಂದು ಪ್ರಶ್ನಿಸಿದ ಅವರು,ಭೈರತಿ ಬಸವರಾಜ್ಗೆ ನಾನೇ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೆ.ಈಗ ಅವರು ಪಕ್ಷಕ್ಕೆ ವಾಪಸ್ಸು ಬರುತ್ತಾರಾ.ರಾಜಕೀಯ ಸಿದ್ದಾಂತ ಇದ್ದರೇ ಅವರು ಎಲ್ಲಿಗೂ ಹೋಗುತ್ತಿರಲಿಲ್ಲ, ಅವರೆಲ್ಲ ಅವಕಾಶವಾದಿಗಳು ಯಾವುದೇ ಕಾರಣಕ್ಕೂ ವಾಪಸ್ಸು ಬರಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
