ಚಿತ್ರದುರ್ಗ:
ಬ್ರಾಹ್ಮಣರೆಂದರೆ ಬುದ್ದಿವಂತರು. ಅದ್ಕಕಾಗಿ ಬ್ರಾಹ್ಮಣ ಸಂಘದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ, ಗುದ್ದಾಟವಾಗಬಾರದು. ಬೇರೆ ಜನಾಂಗದವರು ನಿಮ್ಮನ್ನು ಆದರ್ಶವಾಗಿಟ್ಟುಕೊಳ್ಳುವಂತಿರಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬ್ರಾಹ್ಮಣ ಸಮಾಜಕ್ಕೆ ಕರೆ ನೀಡಿದರು.
ಚಿತ್ರದುರ್ಗ ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ಕಡೆ ದಿನ ಭಾನುವಾರ ಉದ್ಘಾಟಿಸಿ ಮಾತನಾಡಿದರು.ಶಿವಮೊಗ್ಗ ಜಿಲ್ಲೆಯ ಬ್ರಾಹ್ಮಣ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ದೊಡ್ಡದಲ್ಲ. ಬರದನಾಡು ಚಿತ್ರದುರ್ಗ ಬ್ರಾಹ್ಮಣ ಸಂಘ ನೂರು ವರ್ಷಗಳ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಎಲ್ಲಾ ಸಮಾಜದಲ್ಲಿಯೂ ಸಂಘ ಸಂಸ್ಥೆಗಳು ಆರಂಭಗೊಂಡಿದೆ. ಊರು, ದೇಶ ಅಭಿವೃದ್ದಿಯಾಗಬೇಕಾದರೆ ಬ್ರಾಹ್ಮಣರಿಂದ ಮಾತ್ರ ಸಾಧ್ಯ. ಬ್ರಾಹ್ಮಣರು ನಂಬಿಕೆಗೆ ಅರ್ಹರು. ಹಾಗಾಗಿ ನಾನು ಬ್ರಾಹ್ಮಣ ಜನಾಂಗದ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಕೆಲವು ಜನಾಂಗ ಸಂಘಟಿತರಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಬ್ರಾಹ್ಮಣರು ಏನೆ ಕೆಲಸ ಮಾಡಿದರೂ ಯಾರಿಗೂ ವಂಚನೆಯಾಗದಂತೆ ಮಾಡುತ್ತಾರೆ. ಈಗಲೂ ನನಗೆ ಬ್ರಾಹ್ಮಣರೆ ವಕೀಲರು, ಪಿ.ಎ.ಕೂಡ ಬ್ರಾಹ್ಮಣರು, ವರ್ಷಕ್ಕೊಮ್ಮೆ ನನ್ನ ಆರೋಗ್ಯ ತಪಾಸಣೆ ಮಾಡುವ ವೈದ್ಯರು ಬ್ರಾಹ್ಮಣರೆ. 1994 ರಲ್ಲಿ ನಾನು ಪ್ರಥಮ ಬಾರಿಗೆ ಚುನಾವಣೆಗೆ ನಿಂತಾಗ ಬ್ರಾಹ್ಮಣ ಸಮಾಜದ ಹಿರಿಯರಾದ ಅಶ್ವಥ್‍ನಾರಾಯಣವರು ಮನೆ ಮನೆಗೆ ಸುತ್ತಾಡಿ ನನ್ನ ಪರವಾಗಿ ಮತ ಯಾಚಿಸಿ ಗೆಲುವಿಗೆ ಕಾರಣರಾದವರು ಎಂದು ಇಡೀ ಬ್ರಾಹ್ಮಣ ಸಮಾಜಕ್ಕೆ ಕೃತಜ್ಞತೆ ಸಮರ್ಪಿಸಿದರು.
ಹದಿಮೂರು ಬಾರಿ ಟಿಕೇಟ್‍ಗೆ ಪ್ರಯತ್ನಿಸಿ ಸುಮ್ಮನಾದೆ. ಪ್ರಥಮ ಬಾರಿಗೆ ವಿಧಾನಸಭೆ ಚುನಾವಣಗೆ ನಿಂತು ಗೆಲ್ಲಲು ಬ್ರಾಹ್ಮಣರ ಕೊಡುಗೆಯಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಚಿತ್ರದುರ್ಗ ಬ್ರಾಹ್ಮಣ ಸಂಘ ಇನ್ನು ಸಂಘಟಿತರಾಗಿ ಸಮಾಜಕ್ಕೆ ಹೆಚ್ಚಿನ ಆದಾಯ ಬರುವ ರೀತಿಯಲ್ಲಿ ಸಂಘವನ್ನು ಬಲಿಷ್ಟವಾಗಿ ಬೆಳೆಸಿ ಎಂದು ತಿಳಿಸಿದರು.
ಚಿತ್ರದುರ್ಗ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷರುಗಳಾದ ಆನಂದರಾಂ ಉಳ್ಳೂರು, ಆರ್.ಎಸ್.ಕೃಷ್ಣಮೂರ್ತಿ, ಜಿ.ಆರ್.ಗುರುರಾಜರಾವ್, ಟಿ.ಕೆ.ಚಂದ್ರಶೇಖರ್, ಸಂಘದ ನಿರ್ದೇಶಕಿ ಆಶಾ ಜಗದೀಶ್ ವೇದಿಕೆಯಲ್ಲಿದ್ದರು. ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಬ್ರಾಹ್ಮಣ ಸಂಘದ ಹಿರಿಯ ಸದಸ್ಯರು, ಐವತ್ತು ವರ್ಷಗಳ ಕಾಲ ಸಾರ್ಥಕ ವೈವಾಹಿಕ ಜೀವನ ನಡೆಸಿದವರು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಸಂಘಕ್ಕೆ ಸೇವೆ ಸಲ್ಲಿಸಿದವರು, ಶತಮಾನೋತ್ಸವ ಸಂಭ್ರಮಾಚರಣೆಯ ವಿವಿಧ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.