ಬೆಂಗಳೂರು
ಬನಶಂಕರಿಯ ಎರಡನೇ ಹಂತದಲ್ಲಿ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ವೇಗವಾಗಿ ಮನೆಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಕ್ಯಾಶಿಯರ್‍ರೊಬ್ಬರು ರಸ್ತೆ ಬದಿಯ ಅಂಗಡಿಯೊಂದರ ಗೋಡೆಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ..
ಬನಶಂಕರಿಯ ಬಿವಿಕೆ ಕ್ಲಬ್‍ನ ಕ್ಯಾಶಿಯರ್ ರಾಮಕೃಷ್ಣ(55)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಬನಶಂಕರಿಯ ಬಿಕೆಎಸ್‍ನ ಕ್ಲಬ್‍ನಲ್ಲಿ ರಾತ್ರಿ ಪಾಳಯದ ಕೆಲಸ ಮುಗಿಸಿಕೊಂಡು ರಾತ್ರಿ 11.10ರ ವೇಳೆ ಬಜಾಜ್ ಚೇತಕ್ ಸ್ಕೂಟರ್‍ನಲ್ಲಿ ಕೆಂಪೇಗೌಡನಗರದ ಮನೆಗೆ ವೇಗವಾಗಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಬನಶಂಕರಿಯ ಎರಡನೇ ಹಂತದ 9ನೇ ಮುಖ್ಯರಸ್ತೆಯಲ್ಲಿ ರಸ್ತೆ ಬದಿಯ ಅಂಗಡಿಯೊಂದರ ಗೋಡೆಗೆ ಹೊಡೆದಿದ್ದಾರೆ.ಹೆಲ್ಮೆಟ್ ಹಾಕದಿದ್ದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಬನಶಂಖರಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.