ಬೀದಿ ಬದಿ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್ ಸಾಲ ವಿತರಣೆ.

ಕೊರಟಗೆರೆ
       ಕೊರೋನಾ ಮಹಾಮಾರಿಯಂದ ರಾಜ್ಯದಲ್ಲಿ ಲಾಕ್‍ಡೌನ್ ನಿಂದಾಗಿ ಬೀದಿನದಿವ್ಯಾಪಾರಿಗಳು, ಶ್ರಮಿಕವರ್ಗದವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಮತ್ತೆ ವ್ಯಾಪಾರ   ಪ್ರಾರಂಭಿಸಲು ಈ ವರ್ಗದ ಜನತೆಗೆ ಡಿಸಿಸಿ ಬ್ಯಾಂಕ್ ಕೊರಟಗೆರೆ ಶಾಖೆಯಿಂದ ಬಡವರ ಬಂದು ಯೋಜನೆಯಲ್ಲಿ ಶೋನ್ಯ ಬಡ್ಡಿ ದರದಲ್ಲಿ ಹತ್ತು ಸಾವಿರದವರೆಗೂ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗುತ್ತಿದ್ದು ಅದರೆ ಸದುಪಯೋಗ ಪಡೆಯುವಂತೆ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ, ಯುವಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.
     ಅವರು ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಬೀದಿ ಬದಿಯ ಅರ್ಹ ಫಲಾನುಭವಿಗಳಿಗೆ ಬಡವರ ಬಂಧು ಯೋಜನೆಯಡಿ ಚೆಕ್ ವಿತರಣೆಗೆ ಚಾಲನೆ ಮಾಡಿ ಮಾತನಾಡಿ ಕೊವಿಡ್-19 ಲಾಕ್‍ಡೌನ್ ಪರಿಣಾಮ ಕಳೆದ 2 ತಿಂಗಳಿನಿಂದ ಬೀದಿ ಬದಿಯ ವ್ಯಾಪಾರಿಗಳ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು
      ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಮತ್ತೆ ಅವರು ವ್ಯಾಪಾರ ಪ್ರಾರಂಭಿಸಲು ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಅವರು ಖಾಸಗಿಯವರ ಮೀಟರ್ ಬಡ್ಡಿ ಕಪಿಮುಷ್ಠಿಗೆ ಸಿಲುಕಿ ಪರದಾಡುವುದನ್ನು ನಿಯಂತ್ರಿಸಲು ಡಿಸಿಸಿ ಬ್ಯಾಂಕ್ ಅದ್ಯಕ್ಷರಾದ ಕೆ,ಎನ್.ರಾಜಣ್ಣ ನವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೆ.ಎನ್.ರಾಜಣ್ಣನವರ ಮನವಿ ಸ್ಪಂದಿಸಿದ ಹಿನ್ನಲೆಯಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಜಿಲ್ಲಾದ್ಯಾಂತ ಬಡವರ ಬಂಧು ಯೋಜನೆಯಡಿಯಲ್ಲಿ ಶೋನ್ಯ ಬಡ್ಡಿಯಲ್ಲಿ ಕನಿಷ್ಟ ಹತ್ತುಸಾವಿರ ರೂ ಸಾಲ ಸೌಲಭ್ಯ ನೀಡಲಾಗುತ್ತಿದ್ದು
     ಅದರ ಸದುಪಯೋಗ ಪಡೆಯುವಂತೆ ತಿಳಿಸಿದ ಅವರು ಇದರಲ್ಲಿ ಯಾವ ರಾಜಕೀಯವಿಲ್ಲಾ ಎಂದು ಸ್ಪಷ್ಟ ಪಡಿಸಿದರು ಅವರು ಈ ಸಂದರ್ಬದಲ್ಲಿ ಪಟ್ಟಣದ 44 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಮಂಜೂರಾಗಿ ಚೆಕ್ ವಿತರಿಸಲಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಸಾಲ ವಿತರಿಸಲಾಗುವದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಡಿಸಿಸಿ ಬ್ಯಾಂಕ್ ನಿದೇರ್ಶಕ ಹನುಮಾನ್, ಖಾಖೆಯ ವ್ಯವಸ್ಥಾಪಕ ಲೋಕೇಶ್‍ಕುಮಾರ್, ಮಹೇಶ್‍ಕುಮಾರ್, ನೋಡಲ್ ಅಧಿಕಾರಿಗಳಾದ ಶಿವಣ್ಣ, ಭೋರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link