ಹುಳಿಯಾರು
ಹಂದನಕೆರೆ ಹೋಬಳಿಯ ನಡುವನಹಳ್ಳಿ ಹೊಲದಲ್ಲಿ ಮೇಕೆ ಮೇಯಿಸಲು ಹೋಗಿದ್ದ ಇಬ್ಬರ ಮೇಲೆ ಚಿರತೆ ದಾಳಿ ಮಾಡಿ ಮಾಡಿದ್ದರ ಪರಿಣಾಮ ಇಬ್ಬರಿಗೂ ಗಾಯವಾಗಿರುವ ಘಟನೆ ಜರುಗಿದೆ.
ಊರಿನಿಂದ ಒಂದು ಕಿಲೋಮೀಟರ್ ದೂರದಲ್ಲಿನ ಕಲ್ಲುಮಟ್ಟಿಯ ಹೊಲದಲ್ಲಿ ಮೇಕೆ ಮೇಯಿಸಲು ಹೋಗಿದ್ದಾಗ ಈ ಘಟನೆ ಜರುಗಿದ್ದು ರಾಜಪ್ಪ (60)ಹಾಗೂ ತಿಮ್ಮೇಶ( 45) ಎಂಬುವರಿಗೆ ಕೈಗಳಲ್ಲಿ ಗಾಯಗಳಾಗಿದೆ.
ಇವರ ಕೂಗಾಟ ಕೇಳಿ ಚಿರತೆ ಓಡಿಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನ್ ಇಟ್ಟಿದ್ದರು ಸಹ ಪ್ರಯೋಜನವಾಗಿಲ್ಲ.ಹಾಗಾಗಿ ಇಲಾಖೆಯವರು ಚಿರತೆಯಿಂದ ಹೆಚ್ಚಿನ ಅನಾಹುತ ಸಂಭವಿಸುವ ಮುಂಚೆಯೇ ಚಿರತೆಯನ್ನು ಹಿಡಿಯಲೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.