ರಾಷ್ಟೀಯತೆ ರಾಷ್ಟಾಭಿಮಾನದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ನಾಯಕರಿಗೆ ಹೆಚ್ಚು:ಎಚ್ ಕೆ ಪಾಟೀಲ

ಹಾವೇರಿ :

       ಕಾನೂನು ಬದ್ಧ ಸ್ಥಾನದಲ್ಲಿ ಇದ್ದು, ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳವವರಿಂದ ಕಾನೂನು ಪಾಲನೆ ಆಗಲಾರದು ಎಂದು ಕಾಂಗ್ರೇಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ಆಕ್ರೋಶ ವ್ಯಕ್ತ ಪಡಿಸಿದರು.

        ನಗರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟೀಯತೆ ರಾಷ್ಟಾಭಿಮಾನದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ನಾಯಕರಿಗೆ ಹೆಚ್ಚು ನಂಬಿಕೆ ಇರುವುದು.ಚುನಾವಣೆಯ ದಿಕ್ಕು ತಪ್ಪಿಸಲು ಭಾರತೀಯ ಜನತಾ ಪಕ್ಷ ಇಲ್ಲ ಸಲ್ಲದ ಭಾವನೆಗಳನ್ನು ಜನರಲ್ಲಿ ಭಿತ್ತಿ ವಾಸ್ತವ ಪರಸ್ಥಿತಿಯನ್ನು ಮರೆಮಾಚಿಸುತ್ತಿದೆ ಇಂತಹ ಭಾವನಾತ್ಮಕ ವಿಚಾರ ಜನರಿಗೆ ಗೊತ್ತಾಗುತ್ತದೆ. ಚುನಾವಣೆಗೊಸ್ಕರ ಮಾಡುವ ನಾಟಕೀಯತೆ ಬಹಳ ದಿನ ನಡೆಯುವುದಿಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದರು.

        ಅತ್ಯುತ್ತಮ ಜನಪರ ಪ್ರನಾಳಿಕೆ : ಕಾಂಗ್ರೇಸ್ ಪಕ್ಷ ದೇಶದ ಎಲ್ಲ ವರ್ಗದ ಜನರ ಬೇಡಿಕೆ ಹಾಗೂ ಸರ್ವಜನಿಕರ ಆಶೋತ್ತರಗಳನ್ನು ಗಮನದಲ್ಲಿ ಇಟ್ಟುಕೊಂಡು ದೇಶ ನಿವಾಸಿಗಳಿಗೆ ಅವಶ್ಯಕವಾಗಿರುವ ವಾಸ್ತವ ಅಂಶಗಳನ್ನು ಹೊಂದಿದ ಪ್ರನಾಳಿಕೆ ಅತ್ಯುತ್ತಮವಾಗಿದೆ. ನಾವು ಆಡಳಿತಕ್ಕೆ ಬಂದ ನಂತರ ಇಡೇರಿಸಿಯೇ ತಿರುತ್ತೇವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಹಾಗೂ ಜನಹಿತ ಬಯಸುವ ಪಕ್ಷವಾಗಿದೆ. ಆಕಾಶಕ್ಕೆ ಏಣಿ ಹಾಕುವ ಹಾಗೂ ಏನೋ ಕಾಲ್ಪನಿಕತೆ ತೊರಿಸುವ ಬಿಜೆಪಿ ಪಕ್ಷ ಅಲ್ಲ ನಮ್ಮದು. 

         5 ವರ್ಷದಲ್ಲಿ ಏನು ಮಾಡಿದ್ದಾರೆ ? 2014 ರಲ್ಲಿ ಬಿಜೆಪಿ ಪಕ್ಷ ನೀಡಿದ ಪ್ರನಾಳಿಕೆ ಇಡೇರಿಸದೇ ದೇಶದ ಜನರಿಗೆ ಮೋಸ ಮಾಡುವಂತಾಗಿದೆ. ನಮ್ಮ ಪ್ರನಾಳಿಕೆಯಲ್ಲಿ ಬಡ ಕುಟುಂಬಕ್ಕೆ ಪ್ರತಿ ತಿಂಗಳ 6 ಸಾವಿರ ರೂ ಅಂತೆ ವರ್ಷಕ್ಕೆ 72 ಸಾವಿರ ರೂ ನೀಡುವ ಅಂಶವಿದೆ. ರಾಜಕೀಯವಾಗಿ ಮಹಿಳೆಯರಿಗೆ 33% ಮಿಸಲಾತಿಗೆ ಒತ್ತು. ದೇಶ ರಕ್ಷಣೆ ಹಾಗೂ ಎಲ್ಲ ವರ್ಗದ ಜನರ ಬೇಡಿಕೆಗಳನ್ನು ಒಳಗೊಂಡ ಪ್ರನಾಳಿಕೆಯಾಗಿದೆ.

         ಈ ಲೋಕಸಭಾ ಚುನಾವಣೆಯಲ್ಲಿ ಜನರ ಪರವಾಗಿರುವ ಸರ್ಕಾರ ಅವಶ್ಯಕತೆ ಇದೆ. ನಾವು ಅಧಿಕಾರಕ್ಕೆ ದೇಶದ ಜನರ ಆರ್ಶಿವಾದೊಂದಿಗೆ ಬರುತ್ತೇವೆ ನೂರಷ್ಟು ನಾವು ಕೊಟ್ಟ ಭರವಸೆ ಇಡೇರಿಸುತ್ತೇವೆ ಎಂದು ಎಚ್ ಕೆ ಪಾಟೀಲ ಹೆಳಿದರು. ದೇಶದಲ್ಲಿರೋದು ಭಾರತೀಯ ಸೇನೆ ಹೊರತು ಮೋದಿ ಸೇನೆ ಅಲ್ಲಾ : ದೇಶದ ರಕ್ಷಣೆ ಮಾಡಿ ದೇಶ ಸುಭ್ರವಾಗಿರಲು ಕಾರಣವಾದ ಭಾರತೀಯ ಸೇನೆ. ದೇಶ ಸುರಕ್ಷಿತವಾಗಿ ಇರಲು ತಮ್ಮ ಪ್ರಾಣ ಹುತಾತ್ಮರಾಗಲು ಸಿದ್ದರಾಗಿರುತ್ತಾರೆ.

       ದೇಶದಲ್ಲಿ ಸೈನಿಕರಿಗೆ ಉನ್ನತ ಗೌರವವಿದೆ.ಸೇನೆ ದೇಶದ ಸಂರಕ್ಷಣೆ ಸಂಕೇತ. ಆದರೆ ಬಿಜೆಪಿ ಪಕ್ಷದವರು ವ್ಯಕ್ತಿ ಸೇನೆಯಾಗಲು ಹೊರಟ್ಟಿದ್ದಾರೆ. ಕಾನೂನು ಬದ್ದ ಸ್ಥಾನ ಹೊಂದಿರುವ ಆದಿತ್ಯನಾಥ್ ಮೋದಿ ಸೇನೆ ಎಂದು ಹೇಳುವಷ್ಟು ರಾಷ್ಟೀಯತೆಯನ್ನು ವ್ಯಕ್ತಿಗತಗೊಳಿಸುತ್ತಿದ್ದಾರೆ. ದೇಶ ಮುಖ್ಯವೇ ಹೊರತು ವ್ಯಕ್ತಿ ಅಲ್ಲಾ. ದೇಶ ಶಾಶ್ವತ ಆದರೆ ವ್ಯಕ್ತಿ ಅಲ್ಲಾ. ದೇಶ ಸೇನೆಯನ್ನು ವ್ಯಕ್ತಿಗತ ಸೇನೆ ಮಾಡಬಾರದು.

          ಸೇನೆಯ ಸಾಧನೆಯನ್ನು ಬಿಜೆಪಿಯವರು ತಮ್ಮ ಸಾಧನೆ ಎಂದು ಹೇಳಿಕೊಳ್ಳುವಷ್ಟು ಮುಂದುವರಿದಿದ್ದಾರೆ ಎಂದು ಎಚ್‍ಕೆಪಿ ಟೀಕಿಸಿದರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಜನರ ಆರ್ಶಿವಾದದಿಂದ ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಗೆಲವು ನಿಶ್ಚಿತ. ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಹೆಚ್ಚು ಸೀಟು ಗೆಲ್ಲುವ ಮೂಲಕ ಯುಪಿಎ ಆಡಳಿತ ಕೇಂದ್ರದಲ್ಲಿ ಬರಲಿದೆ. ನಾವು ನೀಡಿದ ಎಲ್ಲ ಭರವಸೆ ಇಡೇರಿಸುತ್ತೇವೆ ಎಂದು ಎಚ್,ಕೆ ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ.ಮುಖಂಡರಾದ ಎಸ್,ಎಫ್,ಎನ್ ಗಾಜೀಗೌಡ್ರ.ಎಂಎಂ ಹಿರೇಮಠ,ಸಂಜೀವಕುಮಾರ ನೀರಲಗಿ.ಶ್ರೀನಿವಾಸ್ ಹಳ್ಳಳ್ಳಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link