ಹೈಸಿಸ್ ಉಪಗ್ರಹದ ಉಡಾವಣೆಗೆ ಕೌಂಟ್ ಡೌನ್ …!!

ಬೆಂಗಳೂರು

        ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅತ್ಯಾಧುನಿಕ ಭೂ ಸರ್ವೇಕ್ಷಣೆಯ ಅತ್ಯಂತ ಸೂಕ್ಷ್ಮ ಹಾಗೂ ಸ್ಪಷ್ಟ ಚಿತ್ರಣ ನೀಡಬಲ್ಲ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹದ ಉಡಾವಣೆಗೆ 28 ಗಂಟೆಗಳ ಇಳಿ ಎಣಿಕೆ ಆರಂಭವಾಗಿದೆ.

       ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ನಾಳೆ ಬೆಳಗ್ಗೆ ಪಿಎಸ್‍ಎಲ್‍ವಿ -ಸಿ43 ಉಪಗ್ರಹ ವಾಹಕವು 8 ವಿದೇಶಗಳ 30 ಉಪಗ್ರಹಗಳ ಜೊತೆಗೆ ಹೈಸಿಸ್ ಉಪಗ್ರಹವನ್ನು ಹೊತ್ತೊಯ್ಯಲಿದ್ದು ನಾಳೆ ಬೆಳಗ್ಗೆ 9.58ಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

        ಉಡ್ಡಯನದ 113 ನಿಮಿಷಗಳ ಅವಧಿಯಲ್ಲಿ ನಾಲ್ಕನೇ ಹಂತದ ಎಂಜಿನ್ ಎರಡು ಬಾರಿ ಪುನರಾರಂಭಗೊಂಡ ನಂತರ380 ಕೆಜಿಯ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹವನ್ನು ಇತರ 30 ಸಹ ಉಪಗ್ರಹಗಳ ಸಮೇತ ಎರಡು ವಿಭಿನ್ನ ಕಕ್ಷೆಗಳಲ್ಲಿ ಇರಿಸಲಾಗುವುದು. ಇದು ಇಸ್ರೋದ ಮೂರನೇ ಅತಿ ದೊಡ್ಡ ಉಡಾವಣಾ ಕಾರ್ಯಾಚರಣೆಯಾಗಿದೆ.

      ಇದೇ ವರ್ಷದ ಜನವರಿಯಲ್ಲಿ ಪಿಎಸ್‍ಎಲ್‍ವಿ -ಸಿ40 2 ಗಂಟೆ 21 ನಿಮಿಷದ ಅವಧಿಯಲ್ಲಿ 31 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು.

        ಸೆಪ್ಟೆಂಬರ್ 2016ರಲ್ಲಿ ಪಿಎಸ್‍ಎಲ್‍ವಿ-ಸಿ35 ವಾಹಕವು 2 ಗಂಟೆ 15 ನಿಮಿಷದಲ್ಲಿ 8 ಉಪಗ್ರಹಗಳನ್ನು ಕಕ್ಷೆಗೆ ಹೊತ್ತೊಯ್ದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap