ಹಗರಿಬೊಮ್ಮನಹಳ್ಳಿ:
ತಾಲೂಕಿನಾಧ್ಯಂತ ಮಂಗಳವಾರ ರಾತ್ರಿ ಬಿರುಗಾಳಿ ಸಮೇತ ಸುರಿದ ಮಳೆಗೆ ಮೆಕ್ಕೆಜೋಳ ಹಾನಿಯಾಗಿದೆ.ತಾಲೂಕಿನ ಹಂಪಾಪಟ್ಟಣ ವ್ಯಾಸಪುರ ಹಾಗೂ ಸುತ್ತಮುತ್ತಲಿನಲ್ಲಿ ಬಿರುಗಾಳಿಯಿಂದ ಕೂಡಿದ ಗುಡುಗು ಮಿಂಚಿನ ಸಮೇತ ಮಳೆಗೆ ಹಂಪಾಪಟ್ಟಣ ಗ್ರಾಮದ ಬಸವರಾಜ ಎಂಬುವವರಿಗೆ ಸೇರಿದ 2.5ಎಕರೆಗೂ ಹೆಚ್ಚು ಕೃಷಿ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತ ಮೆಕ್ಕೆಜೋಳ ನೆಲಕಚ್ಚಿದೆ.
ಒಂದುವರ್ಷವಿಡಿ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ ನೆಲಕಚ್ಚಿ ಕೈಗೆಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಬಸವರಾಜ್ ಗೋಳಾಡುತ್ತಾರೆ.
ತಾಲೂಕಿನಲ್ಲಿ ಮಳೆಯಾದ ವರದಿ:
ಮಂಗಳವಾರ ಸಂಜೆಯಿಂದ ಆರಂಭವಾದ ತುಂತುರು ಮಳೆ, ಬುಧವಾರ ಬೆಳಗಿನ 6ಗಂಟೆಯವರೆಗೂ ಸುರಿಯಿತು. ಒಂದುಕಡೆ ಸಾಧಾರಣ ಮಳೆಯಾದರೆ ಮತ್ತುಂದುಕಡೆ ಉತ್ತಮ ಮಳೆಯಾಗಿದೆ. ಹ.ಬೊ.ಹಳ್ಳಿ 16.6 ಮಿ.ಮೀ, ತಂಬ್ರಹಳ್ಳಿ 8.1 ಮಿ.ಮೀ, ಕೋಗಳಿ 17.6 ಮಿ.ಮೀ, ಹಂಪಾಸಾಗರ 33.2ಮಿ.ಮೀ ಹಾಗೂ ಮಾಲವಿ ಹೋಬಳಿಯಲ್ಲಿ 9.2ಮಿ.ಮೀ.ನಷ್ಟು ಮಳೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
