ಹೊಸಪೇಟೆ:
ತುಂಗಭದ್ರಾ ಜಲಾಶಯದ ಎಡದಂಡೆಯ ಮುಖ್ಯಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಮುನಿರಾಬಾದ್ ಸಮೀಪದ ಪಂಪಾವನಕ್ಕೆ ಮಂಗಳವಾರ ನುಗ್ಗಿದ್ದ ಘಟನೆ ನಡೆದಿದೆ.
ಪಂಪಾವನದ ಇಡೀ ಉದ್ಯಾನವೇ ಜಲಾವೃತಗೊಂಡಿದೆ. ಜಲಾಶಯ ಒಡೆದಿಲ್ಲ, ಸುಭದ್ರವಾಗಿದೆ. ಜನರು ಆತಂಕಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ಜಲಾಶಯ ಒಡೆದು ಮುನಿರಾಬಾದ್ ಸೇರಿದಂತೆ ಸುತ್ತಮುತ್ತಲಿನ ಭಾಗಗಳಿಗೆ ನೀರು ನುಗ್ಗಲ್ಲದೆ ಎಂಬ ವದಂತಿ ಎಲ್ಲೆಡೆ ಹರಡಿದ್ದರಿಂದ ಕೆಲವು ಸಮಯ ಜನರಲ್ಲಿ ಆತಂಕ ಮನೆಮಾಡಿತ್ತು. ನದಿ ಪಾತ್ರದ ಜನ ಭಯಭೀತರಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತೆರಳಿ ಪರಿಶೀಲಿಸಿದರು. ನಂತರ ಜಲಾಶಯಕ್ಕೆ ಯಾವುದೇ ಹಾನಿಯಾಗಿಲ್ಲ. ಬದಲಿಗೆ ಎಡದಂಡೆಯ ಮುಖ್ಯಕಾಲುವೆ ಒಡೆದು ನೀರು ಉದ್ಯಾನಕ್ಕೆ ನುಗ್ಗಿದೆ ಎಂದು ತಿಳಿಸಿದರು. ಯಾರು ಕೂಡ ವದಂತಿ, ಗಾಳಿ ಸುದ್ದಿಗೆ ಕಿವಿಗೊಡಬಾರದು. ಕಾಲುವೆಯಲ್ಲಿ ಬಿರುಕು ಉಂಟಾಗಿ ನೀರು ಹರಿಯುತ್ತಿದ್ದು, ಅದನ್ನು ದುರಸ್ತಿಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
