ಮಂಗಳಮುಖಿಯರು ಕೂಡ ಸಮಾಜದ ಅಂಗವಾಗಿದರೆ: ಮಹಾಂತೇಶ

ಸಿರುಗುಪ್ಪ:

        ಸಂವಿಧಾನವು ಸಮಜದ ಎಲ್ಲಾ ವರ್ಗದ, ಎಲ್ಲಾ ಸಮುದಾಯಗಳ 18ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದು, ಮಹಿಳೆಯರು, ಶೋಷಿತರು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಕೂಡ ಯಾವುದೇ ಒತ್ತಡಕ್ಕೆ ಒಳಗಾಗದೆ ಮತವನ್ನು ಚಲಾಯಿಸಿ ಎಂದು ಸಹಾಯಕ ಚುನಾವಣಾಧಿಕಾರಿ ಮಹಾಂತೇಶ ತಿಳಿಸಿದರು

          ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶೋಷಿತ ಮಹಿಳೆಯರ, ದೇವದಾಸಿ ಮಹಿಳೆಯರ, ದಮನಿತ ಮಹಿಳೆಯರ, ವಿಶೇಷ ಚೇತನ ಮಹಿಳೆಯರ, ಮಂಗಳಮುಖಿಯರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಮಂಗಳಮುಖಿಯರು ಕೂಡ ಸಮಾಜದ ಅಂಗವಾಗಿದ್ದು, ಮತದಾನದ ಹಕ್ಕನ್ನು ಹೊಂದಿದ್ದಾರೆ. ಆದ್ದರಿಂದ ಸಮುದಾಯದ ಇತರರಿಗೂ ಮತಚಲಾಯಿಸುವಂತೆ ಜಾಗೃತಿ ಮೂಡಿಸಿ ಗ್ರಾಮೀಣ ಭಾಗದ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಮತದಾನವಾಗಲು ಎಲ್ಲಾ ಮತದಾರರ ಸಭೆಗಳನ್ನು ಆಯೋಜಿಸಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

         ತಹಶೀಲ್ದಾರ ದಯಾನಂದ್ ಪಾಟೀಲ್ ಮಾತನಾಡಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವ ನಮ್ಮದಾಗಿದ್ದು, ನಮ್ಮನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವವರನ್ನು ಆಯ್ಕೆಮಾಡಿ ಕಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ವಿದ್ಯಾಬ್ಯಾಸ ಮಾಡಿದ ಸಜ್ಜನ ಜನಪ್ರತಿನಿಧಿಗೆ ಮತನೀಡುವ ಮೂಲಕ ನಮ್ಮ ಪ್ರತಿನಿಧಿಯನ್ನು ಆಯ್ಕೆಮಾಡುವ ಅವಕಾಶ 5ವರ್ಷಗಳಿಗೊಮ್ಮೆ ಮಾತ್ರ ನಮಗೆ ದೊರೆಯುವುದರಿಂದ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಆಚರಿಸೋಣ ಎಂದು ತಿಳಿಸಿದರು.ತಾ.ಪಂ. ಇ.ಒ. ಶಿವಪ್ಪ ಸುಬೇದಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳ ದೇವದಾಸಿ, ವಿಶೇಷ ಚೇತನ, ಶೋಷಿತ, ಮಂಗಳಮುಖಿ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link