ಕೊಟ್ಟೂರು

ಹಸಿ ಮೊಟ್ಟೆಯನ್ನು ಕುಡಿಯುವುದರಿಂದ ಅದು ಬೇಗನೆ ಜೀರ್ಣವಾಗುವುದಿಲ್ಲ. ಈ ಪದ್ದತಿ ಆರೋಗ್ಯದಾಯಕವಲ್ಲ. ಬೇಯಿಸಿದ, ಇಲ್ಲವೆ ಅಮ್ಲೇಟ್‍ಮಾಡಿ ತಿನ್ನುವುದು ಒಳ್ಳೆಯದು ಎಂದು ಡಾ. ರೇಷ್ಮಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಮೊಟ್ಟೆ ದಿನಾಚರಣೆ ಅಂಗವಾಗಿ ಸಿಂಧು ಪೌಲ್ಟ್ರಿ ಫಾರಂ ಶುಕ್ರವಾರ ರೋಗಿಗಳಿಗೆ ಉಚಿತವಾಗಿ ಬೇಯಿಸಿದ ಮೊಟ್ಟೆಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊಟ್ಟೆಯಲ್ಲಿ ರೋಗ ನಿರೋಧಕಶಕ್ತಿ ಅಧಿಕವಾಗಿರುತ್ತದೆ. ನಿತ್ಯವೂ ಮೊಟ್ಟೆಯನ್ನು ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಾಂಶವನ್ನು ಗಣನೀಯವಾಗಿ ಕಡಿಮೆಮಾಡಬಲ್ಲದು ಎಂದರು.

ಮೊದಲೆಲ್ಲಾ ಮೊಟ್ಟೆ ಮಾಂಸಹಾರವೆಂದು ಪರಿಗಣಿಸಲಾಗಿತ್ತು. ಮೊಟ್ಟೆ ಮೇಲೆ ನಡೆದ ಹಲವಾರು ವೈಜ್ಞಾನಿಕ ಸಂಶೋಧನೆಗಳು ಸಸ್ಯಹಾರವೆಂದು ಘೋಷಿಸಿವೆ. ಆದ್ದರಿಂದ ಮಕ್ಕಳಿಂದ ವೃದ್ದರ ತನಕ ಎಲ್ಲರೂ ಮೊಟ್ಟೆ ಬಳಸಬಹುದು ಎಂದು ಸಲಹೆ ನೀಡಿದರು.

ಇಂದಿನ ಯುವ ಸಮುದಾಯ ಶೋಕೆಗಾಗಿ ಗುಟ್ಕಾ, ವಿಮಲ್, ಪಾನ್‍ಪಾರಗ್ ಸದಾ ತಿನ್ನುತ್ತಾರೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ. ಇದರ ಬದಲು ಮೊಟ್ಟೆ

ಬಾಣಂತಿಯರಿಗೆ ಉಚಿತವಾಗಿ ಬೇಯಿಸಿದ ಮೊಟ್ಟೆಗಳನ್ನು ವಿತರಿಸಿದ ಸಿಂಧೂ ಪೌಲ್ಟ್ರಿ ಫಾರಂನ ಮಾಲಿಕರಾದ ವಿಜಯಲಕ್ಷ್ಮಿ ಚೌದರಿ, ಅರ್ಧಡಜನ್‍ಬಾಳೆಹಣ್ಣು, ಎರಡು ಕಫ್ ಹಾಲು ಒಂದು ಮೊಟ್ಟೆಗೆ ಸಮ. ದಿನವೂ ಮೊಟ್ಟೆಯನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಂಡಂತ್ತಾಗುತ್ತದೆ ಎಂದರು.

ಮೊಟ್ಟೆಯಲ್ಲಿರುವಷ್ಟು ಕ್ಯಾಲ್ಸಿಯಂ,ಪ್ರೋಟೀನ್ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಅದಕ್ಕಾಗಿ ವಿಜ್ಞಾನಿಗಳು ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂದು ಹೇಳಿರುವುದು ಇಲ್ಲಿ ಸ್ಮರಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯೆ ಭಾರತೀ ಪಾಟೀಲ್ ಬಾಣಂತಿಯರಿಗೆ ಉಚಿತವಾಗಿ ಮೊಟ್ಟೆಗಳನ್ನು ವಿತರಿಸಿದರು. ಸಂತೋಷ ಕುಮಾರ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ