ಬೆಂಗಳೂರು
ಕಾರು ಚಾಲಕರಂದೆ ಬಸ್ ಚಾಲಕರು ಇನ್ನು ಮುಂದೆ ಸೀಟ್‌ಬೆಲ್ಟ್ ಧರಿಸುವುದು ಕಡ್ಡಾಯವಾಗಿದ್ದು ಇಲ್ಲದಿದ್ದರೆ ೧ ಸಾವಿರ ರೂ ದಂಡ ತೆರಬೇಕಾಗುತ್ತದೆ
ಖಾಸಗಿ ಬಸ್‌ಗಳು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ನಿಗಮಗಳ ಚಾಲಕರು ಇನ್ನುಮುಂದೆ ಸೀಟ್ ಬೆಲ್ಟ್ ಹಾಕದೆ ಬಸ್ಸನ್ನು ಚಲಾಯಿಸಿದರೆ ೧ ಸಾವಿರ ದಂಡ ಕಟ್ಟಬೇಕಾಗುತ್ತದೆ. ಇಂಥದ್ದೊಂದು ನಿಯಮವನ್ನು ಕಡ್ಡಾಯಗೊಳಿಸಲಿಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.ಈ ಕುರಿತು ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲೇ ಉಲ್ಲೇಖಿಸಲಾಗಿದೆ. ಇದನ್ನು ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಇದರ ಬೆನ್ನಲ್ಲೇ ವಾಹನ ಸವಾರರು ನಿರೀಕ್ಷಿಸುತ್ತಿರುವ ದಂಡ ಪ್ರಹಾರದಲ್ಲಿನ ಕಡಿತಕ್ಕೂ ಕ್ಷಣಗಣನೆ ಆರಂಭವಾಗಿದೆ .ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಲ್ಲಿ ಮೋಟಾರು ವಾಹನಕಾಯ್ದೆಯಲ್ಲಿ ಸೀಟ್ ಬೆಲ್ಟ್ ಕಡ್ಡಾಯಗೊಳಿಸ ಲಾಗಿದೆ. ಸಾರಿಗೆ ಇಲಾಖೆ ಕಡ್ಡಾಯಗೊಳಿಸುವ ತೀರ್ಮಾನವನ್ನು ಬಸ್ ಚಾಲಕರು ಸ್ವಾಗತಿಸಿದ್ದಾರೆ.ದುಬಾರಿ ದಂಡ ಪ್ರಯೋಗಕ್ಕೆ ಬ್ರೇಕ್ ಹಾಕುವ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಪರಿಷ್ಕ್ರತ ದರದ ವರದಿಯನ್ನು ಸರ್ಕಾರಕ್ಕೆ ರವಾನಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








