ಹೊಸದುರ್ಗ
ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ ನೀರಿಗಾಗಿ ಹಳ್ಳಿಯ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಲು ಅವಕಾಶ ಕೊಡಬೇಡಿ ಎಂದು ತಾಲ್ಲುಕು ಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ ಸ್ಥಳಿಯ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿದ್ದ 10 ನೇ ತಾಲ್ಲೂಕು ಪಂಚಾಯತ್ ಸಾಮಾನ್ಯ ಸಬೆಯಲ್ಲಿ ಮಾತನಾಡಿದರು.
ನಂತರ ಮಾತನಾಡಿದ ಅವರು ಕೆಲವು ಅಧಿಕಾರಿಗಳು ಸಕಾಲದಲ್ಲಿ ಸಭೆಗೆ ಹಾಜಾರಾಗುತ್ತಿಲ್ಲ, ಅಧಿಕಾರಿಗಳ ಬದಲು ಅವರ ಅಸಿಸ್ಟೆಂಟ್ ಅವರನ್ನು ಕಳುಹಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಸರಿಪಡಿಸಿಕೊಳ್ಳದಿದ್ದರೆ ಕಾನೂನು ರೀತಿಯ ಕ್ರಮ ಅನಿವಾರ್ಯವಾಗಿ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
2018-19 ನೇ ಸಾಲಿಗೆ ಬರ ನಿರ್ವಹಣೆ ಅಂಗವಾಗಿ ಹೊಸದುರ್ಗ ತಾಲ್ಲೂಕಿನ ಗ್ರಾಮಗಳಿಗೆ ಪ್ರತಿನಿತ್ಯವೂ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿಲ್ಲ, ಹಳ್ಳಿಯ ಜನರು ನೀರಿಗಾಗಿ ಪರದಾಡುತ್ತಿದ್ದಾರೆ ಮೊದಲು ಹಳ್ಳಿಯ ಜನಗಳಿಗೆ ನೀರು ಒದಗಿಸಿ ಎಂದು ಅಧ್ಯಕ್ಷರು ಹೇಳಿದಾಗ ಈ ಮಾತಿಗೆ ಕೂಡಲೇ ಧ್ವನಿ ಎತ್ತಿದ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಳ್ಳಿಯ ಜನಗಳಿಗೆ ನೀರು ಸರಿಯಾಗಿ ಒದಗಿಸುತ್ತಿಲ್ಲ ಮೇಡಂ, ಟ್ಯಾಂಕರ್ ವ್ಯವಸ್ಥೆ ಮಾಡುತ್ತಿಲ್ಲ ನಾವೇನು ವಿಷ ಕುಡಿಯಬೇಕಾ ಎಂದು ಸಭೆಯಲ್ಲಿ ನೀರು ಸರಬರಾಜು ಇಂಜಿನಿಯರ್‍ಗಳ ಮೇಲೆ ಅಕ್ರೋಶ ವ್ಯಕ್ತಪಡಿಸಿದರು.
ಹದಿನಾಲ್ಕನೆ ಹಣಕಾಸು ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಬೇಡ, ಎಲ್ಲವನ್ನು ಸ್ಥಗಿತಗೊಳಿಸಿ ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಿ. ಕುಡಿಯುವ ನೀರಿಗಾಗಿ ನಿರ್ಲಕ್ಷ್ಯೆ ಬೇಡ, ಗಂಭೀರವಾಗಿ ತೆಗೆದುಕೊಳ್ಳಿ. ನೀರಿನ ವಿಚಾರದಲ್ಲಿ ತಾತ್ಸಾರ ಮಾಡಬೇಡಿ ಎಂದರು.
ಬೇಸಿಗೆ ಆರಂಭವಾಗಿರುವುದರಿಂದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿ ಇದು ಪರೀಕ್ಷೆಯ ಕಾಲವಿದ್ದಂತೆ ಸ್ಥಳಿಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಒಡನಾಟವಿಟ್ಟುಕೊಂಡು ಮೇಲಾಧೀಕಾರಿಗಳನ್ನು ಭೇಟಿ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸಿ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಶಿಧರ್ ಮಾತನಾಡಿ ಮೆಟ್ರಿಕ್ ನಂತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡಿದ್ದು ಶೇ 80 ಮಕ್ಕಳ ಖಾತೆಗೆ ಹಣ ಜಮಾ ಮಾಡಿದ್ದೇವೆ. ಪ್ರವರ್ಗ 1 ಮಕ್ಕಳಿಗೆ 2000 ರೂ, ಅದರ್ಸ ಮಕ್ಕಳಿಗೆ 750 ರೂ, ಹೆಣ್ಣು ಮಕ್ಕಳಿಗೆ 900 ಹಣವನ್ನು ಜಮಾ ಮಾಡಿದ್ದೇವೆ ಮತ್ತು ಇನ್ನು ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗೆ 13 ಮಕ್ಕಳಿಗೆ ವಿದ್ಯಾಸಿರಿ ಹೆಸರಿನಲ್ಲಿ ಅಡ್ಮೀಶನ್ ಕೊಟ್ಟಿದ್ದೇವೆ. ಶುಲ್ಕ ವಿನಾಯಿತಿ ವಿದ್ಯಾರ್ಥಿಗಳ ವೇತನ ಮಕ್ಕಳಿಗೆ ಖಾತೆಗೆ ಜಮಾ ಮಾಡಿರುತ್ತೇವೆ ಎಂದರು.
ಬೆಸ್ಕಾಂ ಇಲಾಖೆಯ ತಿರುಪತಿ ನಾಯ್ಕ್ ಮಾತನಾಡಿ ತಾಲ್ಲೂಕಿನಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವನೆ ಬಂದಾಗ ಕ್ರಮ ಜರುಗಿಸುತ್ತೇವೆ ಹಾಗೂ ಗ್ರಾಮ ಪಂಚಾಯಿತಿಗಳ ಕಛೇರಿಗಳ ಬಿಲ್ ಕೂಡ ಕಟ್ಟಿಲ್ಲ ಎಂದು ತಿಳಿಸಿದರು. ಇದೇ ವೇಳೆ ಪಂಚಾಯತ್ ರಾಜ್ ಬಗ್ಗೆ ತಾ.ಪಂ ಸಭೆ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ತಾಲ್ಲುಕು ಪಂಚಾಯತ್ ಕಾರ್ಯನಿರ್ವಾಹಕ ಮಹಮದ್ ಮುಬೀನ್, ಅಧ್ಯಕ್ಷರು ಹೇಮಾ ಮಂಜುನಾಥ್, ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
