ಬೆಂಗಳೂರು
ಎರಡು ದಿನಗಳಿಂದ ನಾಪತ್ತೆಯಾಗಿದ್ದ ಫೈನಾನ್ಸ್ ಕಂಪನಿಯ ಸಾಲ ವಸೂಲಿಗಾರ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು ಮೃತದೇಹವು ಕೊಳೆತ ಸ್ಥಿತಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿರುವ ದುರ್ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಜಿಎಫ್ ಮೂಲದ ಸುರೇಶ್ (24)ಎಂದು ಮೃತ ಸಾಲ ವಸೂಲಿಗಾರನನ್ನು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಉದಯನಗರ ಗಣೇಶ ದೇವಾಲಯ ಹಿಂಭಾಗದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಸುರೇಶ್ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು.ಸುರೇಶ್‍ಗಾಗಿ ಹುಡುಕಾಟ ನಡೆಸಿರುವ ಬೆನ್ನಲ್ಲೇ ಅವರ ಮೃತದೇಹ ಬಾಡಿಗೆಗಿದ್ದ ಮನೆಯ ಹೊರಭಾಗದ ಸಂದಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಿದೆ.
ಫೈನಾನ್ಸ್ ಕಂಪನಿಯೊಂದರ ಸಾಲ ವಸೂಲಿಗಾರನಾಗಿದ್ದ ಸುರೇಶ್ ಮೇಲೆ ಹಣ ದುರ್ಬಳಕೆ ಮಾಡಿಕೊಂಡ ಅರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನ್ನ ಮೊಬೈಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ ಎನ್ನಲಾಗಿದೆ.
ಹೀಗೆ ಎರಡು ದಿನಗಳಾದರೂ ಈತನ ಸುಳಿವು ಸಿಗದ ಕಾರಣ ಜೊತೆಯಿದ್ದವರು ಪೊಲೀಸ್ ಠಾಣೆಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ ನಿನ್ನೆ ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಂದಿದೆ. ಆಗ ಮನೆಗಳ ಸಂದಿಯಲ್ಲಿ ನೋಡಿದಾಗ ಈತನ ಮೃತ ದೇಹ ಕಂಡುಬಂದಿದೆ. ಅಲ್ಲದೇ ಈತನ ಜೊತೆ ಫೈನಾನ್ಸ್ ಕಲೆಕ್ಟ್ ಮಾಡುತ್ತಿದ್ದ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಮೂರ್ನಾಲ್ಕು ಜನ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ವಿಷಯ ತಿಳಿದ ಮಹದೇವಪುರ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
