ಕಾನೂನು ರಥಕ್ಕೆ ಚಾಲನೆ..!!

ಹಾನಗಲ್ಲ :

     ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಲ್ಕು ದಿನಗಳು ಸಂಚರಿಸುವ ಕಾನೂನು ಸಾಕ್ಷರತಾ ರಥಕ್ಕೆ ಸೋಮವಾರ ಬೆಳಿಗ್ಗೆ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಚಾಲನೆ ನೀಡಿದರು.

     ಕಾನೂನು ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಜನತಾ ನ್ಯಾಯಾಲಯವನ್ನು ಒಟ್ಟು 12 ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದೆ. ತಜ್ಞ ವಕೀಲರಿಂದ ಕಾನೂನು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಕಾನೂನು ತಿಳಿವಳಿಕೆ ನೀಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಶಾರದಾದೇವಿ ಹಟ್ಟಿ ನುಡಿದರು.

     ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತಂಬರಿ, ಕಾರ್ಯದರ್ಶಿ ರಮೇಶ ತಳವಾರ, ಸದಸ್ಯರಾದ ಜೆ.ಬಿ.ಕೊಂಡೋಜಿ, ಎನ್.ಎಸ್.ದೊಡ್ಡಮನಿ, ಡಿ.ಎನ್.ಲಕ್ಮಾಪೂರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಎಂ.ಎಸ್.ಹುಲ್ಲೂರ, ವಿನಾಯಕ ಕುರುಬರ, ಚಂದ್ರಶೇಖರ ಜಾಡರ, ಎಸ್.ಬಿ.ಕಳ್ಳಿನಿ, ರಂಗನಾಥ ಅಕ್ಕಿವಳ್ಳಿ, ಸತ್ಯನಾರಾಯಣ, , ಆರ್.ಎಸ್.ಹಾದಿಮನಿ ಮತ್ತಿತರರು ಇದ್ದರು.ಬಳಿಕ ತಾಲೂಕಿನ ಹೇರೂರ, ಉಪ್ಪಣಶಿ ಮತ್ತು ಸೋಮಸಾಗರ ಗ್ರಾಮಗಳಲ್ಲಿ ಸಾಕ್ಷರತಾ ರಥ ಸಂಚಾರ, ಕಾನೂನು ಅರಿವು-ನೆರವು ಕಾರ್ಯಕ್ರಮಗಳು ನಡೆದವು. ವಕೀಲರಾದ ಎಂ.ಎಸ್.ಹುಲ್ಲೂರ, ಜೆ.ಬಿ.ಕೊಂಡೋಜಿ, ವಿನಾಯಕ ಕುರುಬರಅವರು ಉಪನ್ಯಾಸ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link