ಕೊಟ್ಟೂರು
ಮಣ್ಣಿನ ಮಡಿಕೆಯಲ್ಲಿರುವ ನೈವೇದ್ಯ ಒಂದು ವರ್ಷವಾದರು ಕೆಡದೆ ಇದ್ದಹಾಗೆ ಇದ್ದರೆ ಗ್ರಾಮದಲ್ಲಿ ಮಳೆ, ಬೆಳೆ, ಚೆನ್ನಾಗಾಗಿ ಊರು ಸಂವೃದ್ದಿಯಾಗಿರುತ್ತೆ. ಒಂದುವೇಳೆ ಪ್ರಸಾದ ಕೆಟ್ಟರೆ ಊರಿಗೆ ಕೆಡುಗಾಲ, ರೈತರು ಕಷ್ಟ ಪಡಬೇಕಾಗುತ್ತದೆ. ವಿಸ್ಮಯ ಎಂಬ ರೀತಿಯಲ್ಲಿ ಇಲ್ಲಿಯ ತನಕ ಒಮ್ಮೆಯೂ ಕೆಟ್ಟಿಲ್ಲ ಎಂದು ಮಂಗಾಪುರದ ಗ್ರಾಮದ ಜನರು ಹೇಳುತ್ತಾರೆ
ತಾಲೂಕಿನ ಮಂಗಾಪುರ ಗ್ರಾಮದಲ್ಲಿ ಶನಿವಾರ ನಡೆದ ಶ್ರಿ ಮಹೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರೆಯನ್ನು ಇಲ್ಲಿನ ಜನರು ವಿಶೇಷ, ವಿಬಿನ್ನವಾಗಿ ಆಚರಿಸಿದರು.
ವರ್ಷಕೊಮ್ಮೆ ನಡೆಯುವ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಗ್ರಾಮದ ಎಲ್ಲಾ ಸಮುದಾಯದ ಜನರು ಸೇರಿ ಅದೇ ಗ್ರಾಮದ ಐದು ಜನ ಸ್ವಾಮಿಗಳಿಂದ ವಿದಿ ವಿಧಾನಗಳಿಂದ ಸಂಪ್ರದಾಯ ಬದ್ದವಾಗಿ ತುಪ್ಪ, ಬಾಳೆಹಣ್ಣು, ನೀರು ಇತೆರೆ ಆಹಾರ ಪದಾರ್ಥಗಳನ್ನು ಸೇರಿಸಿ ನೈವೇದ್ಯವನ್ನು ಸಿದ್ದಪಡಿಸಿ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿ ಮಣ್ಣಿನ ಮಡಿಕೆಯಲ್ಲಿ ನೆಲದಲ್ಲಿ ಮುಚ್ಚಿಡುತ್ತಾರೆ.
ನಂತರ ಮುಂದಿನ ವರ್ಷ ಅದೆ ದಿನದಂದು ನೈವೇದ್ಯದ ಮಡಿಕೆಯನ್ನು ತೆಗೆಯುತ್ತಾರೆ. ಮಡಿಕೆಯಲ್ಲಿದ್ದ ನೈವೇದ್ಯ ಸ್ವಲ್ಪವೂ ಕೆಡದಂತೆ ಹಾಗೆ ಇದ್ದಾರೆ ಈ ವರ್ಷ ನಮ್ಮ ಊರಿಗೆ ಯಾವುದೆ ರೀತಿಯ ತೊಂದರೆಗಳು ಇಲ್ಲವೆಂದು ಸಂಭ್ರಮದಿಂದ ಸುಮಾರು ವರ್ಷಗಳಿಂದ ಈ ಜಾತ್ರೆಯನ್ನು ಗ್ರಾಮದ ಜನರ ಆಚರಿಸಿಕೊಂಡು ಬರುತ್ತಿದ್ದಾರೆ.
ಮಂಗಾಪುರದಿಂದ ಒಂದು ಕೀ,ಮೀ. ದೂರದಲ್ಲಿರು ಶ್ರೀ ಮಹೇಶ್ವರ ಸ್ವಾಮಿ ದೇವಸ್ಥಾನದ ಒಳಗಡೆ ಪುರುಷರನ್ನು ಬಿಟ್ಟು ಗ್ರಾಮದ ಯಾವುದೇ ಮಹಿಳಿಯರಿಗೆ ಪ್ರವೇಶವಿಲ್ಲ ಜಾತ್ರೆಯ ನಂತರ ಊರ ಮುಂದಿನ ವೀರಭದ್ರೇಶ್ವರ ದೇವಸ್ಥಾನದ ಬಳಿ ರಥ ಬಂದು ನಿಂತಾಗ ಮಾತ್ರ ಮಹಿಳೆಯರು ರಥದ ಗಾಲಿಗೆ ನೀರುಹಾಕುತ್ತಾರೆ ಎಂಬುವುದ ಈ ಜಾತ್ರೆಯ ಮತ್ತೊಂದು ವಿಶೇಷತೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
