ಲೋಕಸಭಾ ಚುನಾವಣೆ ಪೂರ್ವಭಾವಿ ಸಂಘಟನೆಗೆ ಮುಂದಾಗಲು ಕರೆ

ಹಗರಿಬೊಮ್ಮನಹಳ್ಳಿ:

      ಮುಂಬರಲಿರುವ 2019ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಕಾರ್ಯಕರ್ತರ ಮನೆಮನೆಗೆ ತೆರಳಿ ಸಂಘಟನೆಯ ತಯಾರಿ ನಡೆಸಲಾಗುವುದೆಂದು ಬಿಜೆಪಿ ಕ್ಷೇತ್ರದ ಅಧ್ಯಕ್ಷ ನೆರೆಗಲ್ ಕೊಟ್ರೇಶ್ ತಿಳಿಸಿದರು.

       ಅವರು ತಮ್ಮ ನಿವಾಸದಲ್ಲಿ ಮಂಗಳವಾರ 150ನೇ ವರ್ಷದ ಗಾಂಧಿ ಜಯಂತಿ ಆಚರಣೆಯ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪ್ರತಿಯೊಂದು ಬೂತ್‍ನಲ್ಲಿ 20 ಹೊಸ ಸದಸ್ಯರ ನೊಂದಾಣಿ ಮಾಡಿಸಲಾಗುವದು. ಇದರಲ್ಲಿ ಎಸ್.ಸಿ.ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ಸದಸ್ಯರನ್ನಾಗಿ ತೆಗೆದುಕೊಳ್ಳುವ ಮೂಲಕ ಸಂಘಟನೆಗೆ ಮುಂದಾಗಿ ಗುರುತಿಸಲಾಗುವುದು. ಇದರೊಂದಿಗೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಜೊತೆಜೊತೆಗೆ ಪ್ರಧಾನಮಂತ್ರಿಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಸ್ವಚ್ಛತೆ ಆಂದೋಲನ, ಶೌಚಮುಕ್ತ ಗ್ರಾಮಗಳ ಯೋಜನೆಗಳ ಬಗ್ಗೆ ಮತ್ತೊಷ್ಟು ಮಾಹಿತಿ ನೀಡುವುದು ಸೇರಿದಂತೆ ಪಕ್ಷ ಸೇರ್ಪಡೆ ಕಾರ್ಯಗಳು ನಡೆಯಲಿವೆ ಎಂದರು.

       ಪ್ರಧಾನ ಕಾರ್ಯದರ್ಶಿ ಜೆ.ಬಿ.ಶರಣಪ್ಪ ಮಾತನಾಡಿ, ಬಿಜೆಪಿ ಸಂಘಟಿಸುವ ನಿಟ್ಟಿನಲ್ಲಿ ಇದೇ ಅ.07ರ ಭಾನುವಾರದಂದು ಪಟ್ಟಣದ ರೇಣುಕಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಕ್ಷೇತ್ರದಾಧ್ಯಂತ ಬಿಜೆಪಿ ವಿವಿಧ ಮೋರ್ಚಗಳ ಪದಾಧಿಕಾರಿಗಳು ಆಗಮಿಸಿ ಯಶಸ್ವಿಮಾಡಬೇಕೆಂದು ವಿನಂತಿಸಿಕೊಂಡರು.

       ಪ್ರದಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯ ಬಗ್ಗೆ ದೇಶದ ಪ್ರಜೆಗಳಲ್ಲಿ ವಿಶ್ವಾಸ ಉಳಿದುಕೊಂಡಿದೆ. ಆದ್ದರಿಂದ ಆಗಮಿಸುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

       ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಡಾ.ಅಜ್ಜಯ್ಯ, ಎಸ್.ಟಿ.ಜಿಲಾ ಘಟಕದ ಟಿ.ಮಹೇಂದ್ರ, ಒಬಿಸಿ.ಎ. ತಾಲೂಕು ಅಧ್ಯಕ್ಷ ಕಲ್ಲಳ್ಳಿ ನಿಂಗಪ್ಪ, ನಿವೃತ್ತ ಸೇನಾನಿ ರಾಮರೆಡ್ಡಿ, ಬಿ.ಜಿ.ಬಡಿಗೇರ್, ಖಾನಾವಳಿ ಸಿದ್ದಪ್ಪ, ಶ್ರೀನಿವಾಸ, ಗಣೇಶ, ದೇವರಮನಿ ನೀಲಪ್ಪ, ಅಂಬಣ್ಣ, ಪೂಜಾರ್ ಸಿದ್ದಪ್ಪ, ಪೋಟೋ ನಾಗರಾಜ್, ನಾಗಯ್ಯ, ತರಕಾರಿ ಪ್ರಕಾಶ್, ಪೆಟಿಗಿ ವೆಂಕಟೇಶ, ದಾದಾಪೀರ್, ಬಿ.ಕೃಷ್ಣ, ಪರಶುರಾಮಪ್ಪ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link