ಟ್ಯಾಂಕರ್ ನೀರು ಕಲ್ಪಿಸುವ ನೆಪದಲ್ಲಿ ಲಕ್ಷಾಂತರ ರೂ. ಗೋಲ್‍ಮಾಲ್

ಜಗಳೂರು:

      ಚಿಕ್ಕರಕೆರೆ ಗ್ರಾಮಕ್ಕೆ ನೀಡುವ ಟ್ಯಾಂಕರ್ ನೀರಿನಲ್ಲಿ ಗೋಲ್‍ಮಾಲ್ ನಡೆದಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ನೀಲಪ್ಪ ಆರೋಪಿಸಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

       ತಾಲೂಕಿನಲ್ಲಿ ಗುತ್ತಿದುರ್ಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಅರಕೆರೆ ಗ್ರಾಮದಲ್ಲಿ ಟ್ಯಾಂಕರ್ ನೀರು ಕಲ್ಪಿಸುವ ನೆಪದಲ್ಲಿ ಲಕ್ಷಾಂತರ ರೂ. ಗೋಲ್‍ಮಾಲ್ ಮಾಡಲಾಗಿದೆ. ಗ್ರಾಮದಲ್ಲಿ ಒಟ್ಟು 4 ಬೋ ರ್‍ವೆಲ್‍ಗಳಿದ್ದು ಅದರಲ್ಲಿ 2 ಬೋರ್‍ವೆಲ್ ಗಳು ಚಾಲ್ತಿಯಲ್ಲಿದ್ದು, ಆ ಬೋರ್‍ವೆಲ್ ಗಳಲ್ಲೇ ಗ್ರಾಮಕ್ಕೆ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಗ್ರಾಮ ಪಂಚಾಯ್ತಿಯ ಸದಸ್ಯೆ ವಾಣಿಶ್ರೀ ಅವರ ಪತಿ ಶಿವಕುಮಾರ್ ಅವರು ಗ್ರಾಮಕ್ಕೆ 1 ಟ್ಯಾಂಕರ್ ನೀರು ಕೊಡುವ ಮೂಲಕ 8 ಟ್ಯಾಂಕರ್ ನೀರು ನೀಡಲಾಗಿದೆ ಎಂದು ನಕಲು ಜಿಪಿಎಸ್ ಮಾಡಿಸಿ ಒಟ್ಟು 1500 ಟ್ಯಾಂಕರ್ ನೀರು ನೀಡಲಾಗಿದೆ ಎಂದು ಗ್ರಾಮ ಪಂಚಾಯ್ತಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅಧಿಕಾರಿಗಳು ಇದನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ನಾಗರಾಜ್, ಚಿಕ್ಕಅರಕೆರೆ ಗ್ರಾಮದ ಮುಖಂಡ ಉಮೇಶ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link