ಗ್ರಾಮಲೆಕ್ಕಾಧಿಕಾರಿಗಳ ಸಂಘದಿಂದ ಮನವಿ

ಶಿಗ್ಗಾವಿ :

        ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ಕರ್ತವ್ಯನಿರತ ಗ್ರಾಮ ಲೆಕ್ಕಾಧಿಕಾರಿಯ ಮೇಲೆ ಅಕ್ರಮ ಮರಳು ಸಾಗಾಣಿಕೆದಾರರು ಲಾರಿ ಹತ್ತಿಸುವ ಮೂಖಾಂತರ ಹತ್ಯೆ ಮಾಡಿರುವುದನ್ನು ಖಂಡಿಸಿ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಸಿ.ಓ.ಡಿ ತನಿಖೆ ನಡೆಸಿ ತಪ್ಪಿತಸ್ತರಿಗೆ ಕಠೀಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ತಹಶೀಲ್ದಾರ ಶಿವಾನಂದ ರಾಣೆ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.

       ಪಟ್ಟಣದ ಸಮಸ್ತ ತಾಲೂಕ ಗ್ರಾಮಲೆಕ್ಕಾಧಿಕಾರಿಗಳ ಸಂಘ ಹಾಗೂ ಕಂದಾಯ ಇಲಾಖೆಯ ನೌಕರರು ಹಾಗೂ ಗ್ರಾಮ ಸಹಾಯಕರು ಡಿ:22 ರಂದು ರಾಯಚೂರ ಜಿಲ್ಲೆ ಮಾನ್ವಿ ತಾಲೂಕಿನ ನಮ್ಮೆಲ್ಲರ ಸಹೋದ್ಯೋಗಿ ಮಿತ್ರ ಗ್ರಾಮಲೆಕ್ಕಾಧಿಕಾರಿಯಾದ ಸಾಹೇಬ ಪಟೇಲ ಇವರು ಸರ್ಕಾರಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅಕ್ರಮ ಮರಳು ದಂಧೆಕೋರರು ಅಕ್ರಮವಾಗಿ ಮರಳೂ ಸಾಗಾಣಿಕೆ ಮಾಡುತ್ತಿರುವವರನ್ನು ತಡೆಗಟ್ಟಿದಾಗ ಸದರಿ ನೌಕರರ ಮೇಲೆ ಲಾರಿ ಹಾಯಿಸಿ ಹತ್ಯೆ ಗೈದಿರುತ್ತಾರೆ, ಈ ಕೃತ್ಯವನ್ನು ಸಮಸ್ತ ತಾಲೂಕ ಗ್ರಾಮಲೆಕ್ಕಾಧಿಕಾರಿಗಳ ಸಂಘ ಹಾಗೂ ಕಂದಾಯ ಇಲಾಖೆಯ ನೌಕರರು ಹಾಗೂ ಗ್ರಾಮ ಸಹಾಯಕರು ತಿವ್ರವಾಗಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಖಂಡಿಸಿ ಸಿ.ಓ.ಡಿ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿದರು. ಹಾಗೂ ಮೃತರ ಕುಟುಂಬಕ್ಕೆ ಸರ್ಕಾರದಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದರು ಮತ್ತು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಕೋರರು ಇದೇ ಮಾದರಿಯಲ್ಲಿ ಹಲವು ಪ್ರಕಣಗಳಲ್ಲಿ ಕಂದಾಯ ನೌಕರರ ವಿರುದ್ದ ದೌರ್ಜನ್ನವನ್ನು ಎಸಗಿರುತ್ತಾರೆ. ಈಕೃತ್ಯದಿಂದ ನೌಕರರು ನಿರ್ಭಿತೆಯಿಂದ ಕೆಲಸವನ್ನು ನಿರ್ವವಹಿಸಲು ಕಷ್ಠವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆಗೆ ವ್ಯಾಪ್ತಿಗೆ ಒಳಪಡದ ಅಕ್ರಮ ಮರಳು ತಯಾರಿಕೆಯನ್ನು ನಿಷೇದಿಸುವ ಬಗ್ಗೆ ನಿಯಮಗಳನ್ನು ರೂಪಿಸಿ ಕಂದಾಯ ಅಧಿಕಾರಿ ಮತ್ತು ನೌಕರನ್ನು ಈ ಕೆಲಸದಿಂದ ವಿಮುಕ್ತಿಗೊಳಿಸಲು ಆದೇಶ ನೌಕರರು ಹಾಗೂ ಗ್ರಾಮ ಸಹಾಯಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

       ತಾಲೂಕ ಗ್ರಾಮಲೆಕ್ಕಾಧಿಕಾರಿಗಳ ಸಂದ ಅದ್ಯಕ್ಷ, ಎಮ್.ಎಮ್ ಸಂಜೀವಣ್ಣನವರ, ಉಪಾಧ್ಯಕ್ಷ ಎಚ್ಚರೇಶ, ಸಂತೋಷ ಭಜಂತ್ರಿ, ಸಿ.ಎನ್.ಕುಂಬಾರ, ಜೆ.ಆರ್ ಗಾಯಕವಾಡ, ಪ್ರಸಾದ ಅಕ್ಕಿ, ಅಕ್ಷತಾ ಎಸ್. ಅಲೆಗಣಿ, ಬಿ.ಮ ಸಣ್ಣಕ್ಕಿ, ನಿರ್ಮಳಾ ಗಾಣಿಗಿ, ಸಾವಿತ್ರಿ ಬಡಿಗೇರ, ಮಾಹಾಂತೇಶ ಹಡಪದ, ಶ್ರೀಶೈಲ್ ಸಜ್ಜನ, ನೀಲಕಂಟ ರಾಮಯ್ಯನವರ ಲಕ್ಷಣ ಪೂಜಾರ, ಎಸ್.ಎಚ್ ಮುನವಳ್ಳಿ, ರಮೇಶ ಕಮಡೊಳ್ಳಿ, ರವಿ ಶೀ ಕೊರವರ, ಎಚ್.ಟಿ.ಮಂತ್ರೋಡಿ.ಆಯ್ ಎಚ್ ಬಾರ್ಕಿ, ಮೇಘಾ ಕುಲಕರ್ಣಿ, ಮಲ್ಲಿಕಾರ್ಜುನ ಶೆಟ್ಟರ, ಶಿಲ್ಪಾ ಜೆ.ಎಸ್. ಎಸ್.ವಿ ಮಡ್ಡಿ, ಗಿರೀಶ ವಿ.ಪಿ. ಎಮ್.ಎಲ್. ನಂದೆಪ್ಪನವರ, ಎಸ್.ವಿ ದುಬೆ ಸೇರಿದಂತೆ ಇತರರು, ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap