ಬಳ್ಳಾರಿ
ಹಂಪಿ ಉತ್ಸವವು ಮುಂದಿನ ತಿಂಗಳು ಮಾರ್ಚ್ 2 ಮತ್ತು 3 ರಂದು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಂಪಿ ಉತ್ಸವದ ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಾಗೂ ವಿವಿಧ ಇಲಾಖೆಯ ಸಂಯೋಗದೊಂದಿಗೆ ಈ ವರ್ಷ ಮಾರ್ಚ್ 2, 3 ರಂದು ಎರೆಉ ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ಸಮಿತಿಯು ನಿಗದಿತ ಅನುದಾನ ಮಿತಿಯೊಳಗೆ ಅವಶ್ಯಕತೆಗೆ ಅನುಗುಣವಾಗಿ ಕಾರ್ಯಕ್ಕೆ ಬೇಕಾಗಿರುವ ಪ್ರತಿಯೊಂದು ಕಾಮಗಾರಿಗಳನ್ನು ಟೆಂಡರ್ ಮೂಲಕ ನಿರ್ವಹಿಸಬೇಕು.
ನಾಲ್ಕು ವೇದಿಕೆ ನಿರ್ಮಾಣ:
ಈ ಬಾರಿ ಹಂಪಿ ಉತ್ಸವದಲ್ಲಿ 4 ವಿವಿಧ ವೇದಿಕೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ವೇದಿಕೆ ಸಂಬಂದಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ವೇದಿಕೆಗಳ ಸ್ಥಳ ಗುರುತಿಸಲಾಗುತ್ತದೆ. ಅತೀ ಹೆಚ್ಚು ಜನ ಸಂಖ್ಯೆ ಸೇರುವ ಇದಕ್ಕೆ ಸ್ಥಳದ ಅವಕಾಶಕ್ಕೆ ಅನುಗುಣವಾಗಿ ವೇದಿಕೆಗಳನ್ನು ನಿರ್ಮಿಸಲಾಗುತ್ತದೆ.
ಕಳೆದ ವರ್ಷದಲ್ಲಿ ನಡೆದ ತುಂಗಾ ಆರತಿ, ವಿಜಯನಗರ ವೈಭವ, ರಾಯಲ್ ದರ್ಬಾರ್ ಈ ವರ್ಷವು ನಡೆಯಲಿದೆ. ಯಾವುದೇ ಕುಂದು ಕೊರತೆ ಇಲ್ಲದಂತೆ ಅಧಿಕಾರಿಗಳು ಉಪ ಸಮಿತಿ ರಚಿಸಿಕೊಂಡು ಕಾರ್ಯಪ್ರವೃತ್ತರಾಗಿ ಕಾರ್ಯ ನಿರ್ವಹಿಸಲು ಸೂಚಿಸಿದರು.
ಅನುದಾನ
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ 1.50 ಕೋಟಿ ರೂ. ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ 1.60 ಕೋಟಿ ರೂ. ಒಟ್ಟಾರೆ 3.10 ಕೋಟಿ ರೂ.ಗಳು ಹಂಪಿ ಉತ್ಸವಕ್ಕೆ ನೀಡಿದ್ದು, ಇನ್ನೂ 5 ರಿಂದ 5.50 ಕೋಟಿ ಹೆಚ್ಚಿನ ಅನುದಾನವನ್ನು ಸ್ಥಳೀಯ ಸಂಪನ್ಮೂಲಗಳಿಂದ ಕ್ರೂಢೀಕರಿಸಿ ಉತ್ಸವ ಜರುಗಿಸಲಾಗುತ್ತದೆ.
ಸ್ಥಳೀಯ ಕಲಾವಿದರಿಗೆ ಆದ್ಯತೆ
ಹಂಪಿ ಉತ್ಸವದಲ್ಲಿ ಜಿಲ್ಲೆಯ ಹಾಗೂ ರಾಜ್ಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಹೊರ ರಾಜ್ಯ ಹಾಗೂ ಅಂತರಾಷ್ಟ್ರೀಯ ಕಲಾವಿದರನ್ನು ಆದಷ್ಟು ದೂರವಿಡಲಾಗುವುದು.
ಸಾರಿಗೆ ವ್ಯವಸ್ಥೆ
ಈ ಬಾರಿಯು ಸಹ ಹಂಪಿ ಉತ್ಸವಕ್ಕೆ ಉಚಿವವಾಗಿ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಕಮಲಾಪುರ, ಕಂಪ್ಲಿ, ಹೊಸಪೇಟೆ ಹಾಗೂ ಇತರೆ ಸ್ಥಳಗಳಿಂದ ಹಂಪಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ ಆದ್ಯತೆ ನೀಡಬೇಕು. ಕುಡಿಯುವ ನೀರಿಗಾಗಿ ಆರ್.ಒ ಪ್ಲಾಂಟ್‍ಗಳನ್ನು ಹಾಕಿಸಲು ಸೂಚಿಸಲಾಯಿತು. ಅಧಿಕಾರಿಗಳು ಪಾಕಿರ್ಂಗ್ ವ್ಯವಸ್ಥೆ, ಊಟದ ವ್ಯವಸ್ಥೆ ಹಾಗೂ ಮಳಿಗೆಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.