ಎ.ದೇವದಾಸ್ ಪರವಾಗಿಎಸ್.ಆರ್ ಹಿರೇಮಠ್‍ಕೋಳೂರಲ್ಲಿ ಮತಯಾಚನೆ

ಬಳ್ಳಾರಿ.

      ಇಂದುಚುನಾವಣಾ ಪ್ರಚಾರದ ಅಂಗವಾಗಿ ಕೋಳೂರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥರಾದಎಸ್.ಆರ್ ಹಿರೇಮಠಅವರುಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರ ಪರವಾಗಿ ಮತ ಯಾಚಿಸಿದರು .ಸಾವಿರಕ್ಕೂ ಅಧಿಕ ಗ್ರಾಮಸ್ಥರು ಈ ಸಭೆಯಲ್ಲಿಪಾಲ್ಗೊಂಡಿದ್ದರು.

        ಎಸ್.ಆರ್ ಹಿರೇಮಠ್‍ಅವರು ಮಾತನಾಡುತ್ತಾ “ಕಳೆದ 30 ವರ್ಷಗಳಿಂದ ರೈತರ, ಕಾರ್ಮಿಕರ, ಸಾಮಾನ್ಯಜನರ ಪರ ನಿರಂತರವಾಗಿಧ್ವನಿಯೆತ್ತುತ್ತಿರುವ ಎಸ್.ಯು.ಸಿ.ಐ (ಸಿ) ಪಕ್ಷದಎ.ದೇವದಾಸ್ ನಮ್ಮನ್ನು ಪ್ರತಿನಿಧಿಸಲು ಸರಿಯಾದ ವ್ಯಕ್ತಿ.ಅತ್ಯಂತ ಪ್ರಾಮಾಣಿಕ, ದುಡಿಯುವಜನರಿಗಾಗಿತಮ್ಮಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.ಎ.ದೇವದಾಸ್‍ಅವರಿಗೆ ಮತ ಹಾಕುವ ಮೂಲಕಜನರಧ್ವನಿ ಪಾರ್ಲಿಮೆಂಟ್‍ಲ್ಲಿ ಮೊಳಗಿಸುವಂತಾಗಲಿ.ಅವರಟ್ರ್ಯಾಕ್ಟರ್‍ಗುರ್ತಿಗೆ ಮತ ಹಾಕಿ” ಎಂದು ಮನವಿ ಮಾಡಿದರು.

      ಮುಂದುವರೆಯುತ್ತಾ,ಎಸ್.ಆರ್ ಹಿರೇಮಠ್ ಅವರು“ನಾ ಖಾವುಂಗಾ ನಾ ಖಾನೆದೂಂಗಾ” ಎಂದುಘಂಟಾಘೋಷವಾಗಿ ಮಾತನಾಡಿದ ಮೋದಿ ಅವರ ಸರ್ಕಾರ, ಇಂದು ರೂ.30,000 ಕೋಟಿಯರಫೇಲ್ ಹಗರಣದಲ್ಲಿ ಭಾಗಿಯಾದ ಆರೋಪವನ್ನು ಎದುರಿಸುತ್ತಿದೆ . ಅನಿಲ್ ಅಂಬಾನಿಗೆ ಈ ಹಗರಣದ ಮೂಲಕ ಲಾಭ ಮಾಡಿಕೊಟ್ಟಿದೆ.ಮೋದಿ ಅವರ ಬಿಜೆಪಿ ಪಕ್ಷದಲ್ಲಿಯಡಿಯೂರಪ್ಪಅಂತಹ ಭ್ರಷ್ಟರು ಸಾಕಷ್ಟಿದ್ದಾರೆ.

      ಮೋದಿ ಅವರ ಆಳ್ವಿಕೆಯಲ್ಲಿ ಸಾವಿರಾರು ಕೋಟಿ ಲೋನ್ ಪಡೆದ ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಅಂತವರು ಬ್ಯಾಂಕ್‍ಗಳಿಗೆ ನಾಮ ಹಾಕಿ ದೇಶ ಬಿಟ್ಟು ಓಡಿ ಹೋದರು.2014 ಚುನಾವಣೆ ಸಂದರ್ಭದಲ್ಲಿಕಾಂಗ್ರೆಸ್ ಸರ್ಕಾರದ 2ಜಿ ಹಗರಣ, ಕಾಮನ್‍ವೆಲ್ತ್‍ ಗೇಮ್ ಹಗರಣ, ಕೋಲ್‍ಗೇಟ್ ಹಗರಣದ ಭ್ರಷ್ಟರನ್ನು ಹಾಗೂ ಬಿಜೆಪಿ ಪಕ್ಷದ ಭ್ರಷ್ಟರನ್ನೂ ಒಳಗೊಂಡಂತೆ ಎಲ್ಲರನ್ನೂ ಜೈಲಿಗೆ ಕಳುಹಿಸುವುದಾಗಿ ಮೋದಿ ಭರವಸೆ ನೀಡಿದ್ದರು.

     ಆದರೆ ಮೋದಿ ಆಳ್ವಿಕೆಯಲ್ಲಿ ಎಷ್ಟು ಜನ ಭ್ರಷ್ಟರುಜೈಲಿಗೆ ಹೋದರು?. ಭ್ರಷ್ಟಾಚಾರದ ಬಗ್ಗೆ ಅಷ್ಟೆಲ್ಲ ಮಾತನಾಡಿದ ಮೋದಿ, ಅವರ ಸರ್ಕಾರಈ 5 ವರ್ಷದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲಿಲ್ಲ. ಈಗ ಚುನಾವಣಾ ಸಂದರ್ಭದಲ್ಲಿನಾಮಕಾವಾಸ್ಥೆ ಲೋಕಾಯುಕ್ತರನ್ನು ನೇಮಕ ಮಾಡಿತು. ‘ನಾ ಖಾವುಂಗಾ ನಾ ಖಾನೆದೂಂಗಾ’ ಎನ್ನವ ಮೋದಿ ಅವರ ಮಾತು ಬರೀ ಸುಳ್ಳು” ಎಂದುದೂರಿದರು. ಹಾಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಅಚ್ಛೇ ದಿನ್ ಈ ಘೋಷಣೆಗಳು ಸಹ ಪೊಳ್ಳು ಘೋಷಣೆಗಳಾಗಿವೆ. 

      ಮೋದಿ ಸರ್ಕಾರದ ನೋಟ್ ಬ್ಯಾನ್, ಜಿಎಸ್‍ಟಿಯಿಂದರೈತರು, ಕಾರ್ಮಿಕರು ಹಾಗೂ ಸಾಮಾನ್ಯಜನ ಬೀದಿಗೆ ಬೀಳುವಂತಾಯಿತು. ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಅಲ್ಪ ಸಂಖ್ಯಾತರು, ದಲಿತರುಅತ್ಯಂತ ಭಯದಿಂದಜೀವನ ಮಾಡುಂತಾಗಿದೆ.ಬಿಜೆಪಿಯ ಸಿದ್ಧಾಂತ ನಮ್ಮ ಸಂವಿಧಾನಕ್ಕೆ ವಿರುದ್ಧವಾದದು. ಹಾಗೆ ಕಾಂಗ್ರೆಸ್‍ಕೂಡಅತ್ಯಂತಜನವಿರೋಧಿ, ಭ್ರಷ್ಟ ಪಕ್ಷವಾಗಿದೆ.

      ಅಕ್ರಮಗಣಿಗಾರಿಕೆಗೆ ಕಾಂಗ್ರೆಸ್ ಪಕ್ಷವುಕುಮ್ಮಕ್ಕು ನೀಡಿದ್ದುಎಲ್ಲರಿಗೂ ತಿಳಿದೇ ಇದೆ.ಈ ಎರಡು ಪಕ್ಷಗಳನ್ನು ಜನತೆ ತಿರಸ್ಕರಿಸಿಬೇಕೆಂದು” ಕರೆ ನೀಡಿದರು.ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದರಾಜ್ಯ ಸಮಿತಿಯ ಸದಸ್ಯರಾದ ಕೆ.ಸೋಮಶೇಖರ್ ಮಾತನಾಡುತ್ತಾ“ ಬಂಡವಾಳಶಾಹಿ ಪಕ್ಷಗಳಾದ ಬಿಜೆಪಿ ಮತ್ತುಕಾಂಗ್ರೆಸ್‍ಜನರರನ್ನು ಪ್ರತಿನಿಧಿಸಲುಯಾವಯೋಗ್ಯತೆಯಿಲ್ಲ. ಈ ಎರಡು ಪಕ್ಷಗಳಿಗೆ ತಕ್ಕ ಪಾಠ ಕಲಿಸಿ, ದುಡಿಯುವಜನರ ನೈಜ ಪ್ರತಿನಿಧಿಯಾದಎ.ದೇವದಾಸ್‍ಅವರನ್ನು ಗೆಲ್ಲಿಸಿ. ಟ್ರ್ಯಾಕ್ಟರ್‍ಗುರ್ತಿಗೆ ಮತ ಹಾಕಿ” ಮನವಿ ಮಾಡಿದರು. ಅಭ್ಯರ್ಥಿಎ.ದೇವದಾಸ್ ಮಾತನಾಡಿದರು.ಅಧ್ಯಕ್ಷತೆಯನ್ನುಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಉಪಾಧ್ಯ ವಹಿಸಿದ್ದರು.ಎಂ.ಎನ್ ಮಂಜುಳಾ, ಡಾ.ಪ್ರಮೋದ್, ಶಾಂತಾ, ಹನುಮಪ್ಪ, ಗೋವಿಂದ್, ನಾಗರತ್ನ, ಸುರೇಶ್, ಬಸಣ್ಣ, ಪಂಪಾಪತಿ ಮುಂತಾದವರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link