ಬೆಂಗಳೂರು
ಅಪಾರ್ಟ್‍ಮೆಂಟ್‍ನ 20ನೇ ಮಹಡಿಯಿಂದ ಏಳು ವರ್ಷದ ಮಗಳನ್ನು ಕೆಳೆಗೆ ಎಸೆದು ಕೊಲೆ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದ ಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಪುಟ್ಟೇನಹಳ್ಳಿಯ ಆರ್‍ಬಿಐ ಲೇಔಟ್‍ನ ಎಲ್‍ಐಸಿ ಅಪಾರ್ಟ್‍ಮೆಂಟ್‍ನ ಪಂಕಜ್(30)ಬಂಧಿತ ಆರೋಪಿಯಾಗಿದ್ದಾನೆ,ಕಳೆದ ಭಾನುವಾರ ರಾತ್ರಿ ರಂದು ಆರೋಪಿ ಪಂಕಜ್ ಪತ್ನಿ ಜ್ಯೋತಿ ಅಗರವಾಲ್ ತನ್ನ ಮಗಳು ಸುಹಾನ (7) ಳನ್ನು ಅಪಾರ್ಟ್‍ಮೆಂಟ್‍ನ 20ನೇ ಮಹಡಿಯಿಂದ ಕೆಳಗೆ ಎಸೆದು ಕೊಲೆಮಾಡಿ ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಾಡೆಲ್ ಆಗಿದ್ದ ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ಮಾಡಿ, ನನ್ನ ಪತಿ ನನ್ನ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿದಿನ ಜಗಳವಾಡುತ್ತಾ ಕಿರುಕುಳ ನೀಡುತ್ತಿದ್ದು ಇದರಿಂದ ಮನನೊಂದು ನಾನು, ಮಗಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.
ಈ ವಿಡಿಯೋ ನೋಡಿದ ಜ್ಯೋತಿ ಸಹೋದರ ಪ್ರಶಾಂತ್ ನೀಡಿದ್ದ ದೂರು ನೀಡಿ ರಾಜಸ್ತಾನ ಮೂಲದ ನನ್ನ ಸಹೋದರಿ ಜ್ಯೋತಿ ಹಾಗೂ ಪಂಕಜ್ ಅವರು 12 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಪಂಕಜ್, ಜಯನಗರದ ಬಳಿ ಹಾರ್ಡ್‍ವೇರ್ ಶಾಪ್ ನಡೆಸುತ್ತಿದ್ದರೆ, ಜ್ಯೋತಿ, ನೃತ್ಯ ಶಾಲೆಗೆ ಹೋಗುತ್ತಿದ್ದರು. ದಂಪತಿ ಆರ್‍ಬಿಐ ಲೇಔಟ್‍ನ ಎಲ್‍ಐಸಿ ಅಪಾರ್ಟ್‍ಮೆಂಟ್‍ನ 20ನೇ ಮಹಡಿಯಲ್ಲಿ ವಾಸಿಸುತ್ತಿದ್ದರು.
ಪತಿ, ಪತ್ನಿ ನಡುವೆ ವಯಸ್ಸಿನ ಅಂತರವಿದ್ದು, ಪಂಕಜ್, ಪತ್ನಿಯ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಜಗಳ ಮಾಡುತ್ತಿದ್ದು ದ್ದಲ್ಲದೆ, ನೃತ್ಯ ಶಾಲೆಗೆ ಹೋಗದಂತೆ ಬೆದರಿಸುತ್ತಿದ್ದ. ಅದಕ್ಕೆ ಒಪ್ಪದ ಜ್ಯೋತಿ, ನಾನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿಲ್ಲ. ನನ್ನ ಹವ್ಯಾಸಗಳಿಗೆ ಅಡ್ಡಿಪಡಿಸಬೇಡಿ ಎಂದು ಹೇಳಿಕೊಂಡಿದ್ದರೂ, ಪತಿ ಸುಮ್ಮನಾಗಿರಲಿಲ್ಲ. ಕಳೆದ ಆಗಸ್ಟ್ 4 ರಂದು ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿದ್ದು, ಪಂಕಜ್ ಮನೆಬಿಟ್ಟು ಹೋಗಿ ಜಯನಗರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು.
ಪತಿ ನನ್ನ ಮೇಲೆ ಅನುಮಾನಪಡುತ್ತಿದ್ದು, ಹಲವು ಬಾರಿ ಬುದ್ಧಿಮಾತು ಹೇಳಿದ್ದರೂ, ಅವರ ವರ್ತನೆ ಸರಿಹೋಗಿರಲಿಲ್ಲ. ಹೀಗಾಗಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದು ನನ್ನ ಮಗಳು ಅನಾಥಳಾಗಬಾರದೆಂದು ಆಕೆಯನ್ನೂ ಜೊತೆಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದರು.
ದೂರು ಆಧರಿಸಿ ತನಿಖೆ ಕೈಗೊಂಡ ಪುಟ್ಟೇನಹಳ್ಳಿ ಪೊಲೀಸರು, ಪಂಕಜ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ.








