ಹರಪನಹಳ್ಳಿ:
ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಹರಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆಂದ್ರಪ್ರದೇಶ್ ಹಾಗೂ ಕರ್ನಾಟಕದ ವಿವಿದೆಡೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರಾದ ಹನುಮಂತರಾಯನವರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಕಳ್ಳತನದ ದೂರು ಸಲ್ಲಿಕೆಯಾಗಿತ್ತು, ಸೂಕ್ತ ಕಾರ್ಯಾಚರಣೆಯಲ್ಲಿ ಜನವರಿ 21 ರಂದು ಕೊಟ್ಟೂರು ಕಡೆಯಿಂದ ಹರಪನಹಳ್ಳಿ ಕಡೆಗೆ ಅನುಮಾನಾಸ್ಪದವಾಗಿ ಬರುತ್ತಿದ್ದವರನ್ನು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಅವರು ಕಳ್ಳತನ ಮಾಡಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ದೂರು ದಾಖಲಿಸಲಾಗಿದೆ ಎಂದು ಡಿ.ವೈ.ಎಸ್.ಪಿ ಮಲ್ಲೇಶ್ ತಿಳಿಸಿದ್ದಾರೆ.
ಬಂದಿತರಿಂದ ಒಂದು ಟಾಟಾ ಸುಮೋ, ಏಳು ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ ಒಟ್ಟು ಎಂಟು ಪ್ರಕರಣಗಳ ಮಾಹಿತಿ ಪಡೆಯಲಾಗಿದೆದ.ಸತೀಶ್ಗೌಡ (25), ತಂದೆ ಲೇಷನಗೌಡ ಪೂಜಾರಿ ವೃತ್ತಿಯಿಂದ ಮರಿಯಮ್ಮನಹಳ್ಳಿ ನಿವಾಸಿ, ಲೋಕೇಶ್(23) ತಂದೆ ಚಂದ್ರಮೌಳಿ, ಲಾರಿ ಚಾಲಕ, ಬಳ್ಳಾರಿ ನಿವಾಸಿ, ಬಂದಿತ ಆರೋಪಿಗಳಾದರೆ. ರಾಕೇಶ್ ಅಲಿಯಾಸ್ ರಾಖಿ, ಬಳ್ಳಾರಿ ನಿವಾಸಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮಲ್ಲೇಶ್, ಸಿಪಿಐ ಕೆ.ಕುಮಾರ್, ಪಿಎಸ್ಐ ಶ್ರೀಧರ್, ಪಿಎಸ್ಐ ಅಪರಾಧ ವಿಭಾಗದ ಲತಾ ತಾಳೇಕರ್, ಎಎಸ್ಐ ಪ್ರಹ್ಲಾದ್ ನಾಯ್ಕ್, ಚಂದ್ರು, ಅಜ್ಜಪ್ಪ, ವಿನಾಯಕ, ಕೊಟ್ರೇಶ್, ಬಿಳಚೋಡ್ ಮಾಲತೇಶ್, ರವಿ ದಾದಾಪುರ, ದಿಲೀಪ್, ಸಿದ್ದೇಶ್, ಅಮ್ಜದ್ ಖಾನ್, ಚಾಲಕರಾದ ಹನುಮಂತಪ್ಪ ಬಾಗಿಗಳಾಗಿದ್ದರು.
ಅಂತರಾಜ್ಯ ಕಳ್ಳರ ಪತ್ತೆಗೆ ಸಾಹಸ ಮಾಡಿದ ಹರಪನಹಳ್ಳಿ ಪೊಲೀಸರಿಗೆ ತಾಲೂಕಿನ ನಿವಾಸಿಗಳು ಪ್ರಶಂಸಿದ್ದಾರೆ. ಇಲಾಖೆ ಕಾರ್ಯ ಶ್ಲಾಘಿಸಿದ ಮಾನ್ಯ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ಬಹುಮಾನ ಘೋಷಿಸಿ ಅಭಿನಂದಿಸಿದ್ದಾರೆ.ಕಳ್ಳರ ಪತ್ತೆಗೆ ನೆರವಾದ ಸಾರ್ವಜನಿಕರಾದ ಬಿ.ರಫೀಕ್ ಹಾಗೂ ಕೆ.ಚಾಂದ್ ಬಾಷಾ ಇವರಿಗೆ ಜಿಲ್ಲಾ ಅಧೀಕ್ಷರು ಸನ್ಮಾನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ