ಅಂತರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಾಗೂ ವಿಶ್ವ ಮೊಟ್ಟೆ ದಿನ ಆಚರಣೆ

0
22

ಸಿರುಗುಪ್ಪ:-

      ದೇಶದ ಕಾಡು ವನ್ಯಜೀವಿ ನದಿಗಳು ಸೇರಿ ಪರಿಸರ ಉಳಿಸಿ ಬೆಳೆಸುವುದು. ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ಲೋಕ ಶಿಕ್ಷಣ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸದಸ್ಯರಾದ ಎ ಅಬ್ದುಲ್ ನಬಿ ಅವರು ಹೇಳಿದರು.

      ಗುರುವಾರ ತಾಲ್ಲೂಕು ಪಂಚಾಯತ್ ಸಭಾಭವನ ಅಕ್ಷರ ವಿಜಯ ಚಂಬರ್ ದಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಹಾಗು? ವಿಶ್ವ ಮೊಟ್ಟೆ ದಿನ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕೌಟುಂಬಿಕ ಹಾಗೂ ಸಾಮಾಜಿಕ ಶೋಷಣೆಯಿಂದ ಹೆಣ್ಣುಮಕ್ಕಳು ಮುಕ್ತಿ ಪಡೆಯಲು ಮಹಿಳೆಯರು ಜಾಗೃತರಾಗಬೇಕು. ಹೆಣ್ಣು ಮಕ್ಕಳಿಗಾಗಿಯೇ ಕಠಿಣ ಕಾಯಿದೆ ಕಾನೂನು ಜಾರಿಯಲ್ಲಿದ್ದರೂ ಅಜ್ಞಾನ,ಅನಕ್ಷರತೆ, ತಿಳಿವಳಿಕೆ ಕೊರತೆಯಿಂದ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ.

     ಲಿಂಗ ತಾರತಮ್ಯ ಹೋಗಲಾಡಿಸುವ ಅರಿವು ತಿಳಿವಳಿಕೆ ಮೂಡಿಸಬೇಕಾಗಿದೆ. ಅದೇ ರೀತಿ ಮೊಟ್ಟೆ ಸೇವನೆಯಿಂದ ದೈಹಿಕ ಬೆಳವಣಿಗೆಗೆ ತೂಕ ಇಳಿಸುವುದು,ಮೆದುಳು ಬೆಳೆಯುವ ಉತ್ಕೃಷ್ಟ ಆಹಾರ,ಮಕ್ಕಳು,ಮಹಿಳೆಯರು, ಗರ್ಭಿಣಿಯರು , ಬಾಣಂತಿಯರು , ದಿನಕ್ಕೊಂದು ಮೊಟ್ಟೆ ಸೇವಿಸಿರಿ. ಆರೋಗ್ಯದಿಂದಿರಿ ಎಂದರು.

      ತಾಲ್ಲೂಕು ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಪದ್ಮನಾಭರಾವ್,ಸ್ವಚ್ಛ ಭಾರತ್ ಶೌಚಾಲಯದ ಯೋಜನೆ ತಾಲೂಕು ಸಂಯೋಜಕ ಪಿ.ರಂಜಾನ್ ಸಾಬ್, ಸಾಕ್ಷರತಾ ಕಾರ್ಯಕರ್ತರಾದ ಎ ಮೊಹಮ್ಮದ್ರ ಇಬ್ರಾಹಿಂ, ಎ ಮೊಹಮ್ಮದ್ ರಫಿ,ಎ ಮೊಹಮ್ಮದ್ ನೌಷಾದ್ ಅಲಿ ತಾಲ್ಲೂಕು ಪಂಚಾಯತ್ ಹೆಚ್. ಸುಧಾಕರ್ ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here