ಹಾವೇರಿ :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಥಮ ದರ್ಜೆ ಲೆಕ್ಕಸಹಾಯಕನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ನಂದಿ ಲೇಔಟ್ ನಲ್ಲಿರೋ ಬಾಡಿಗೆ ಮನೆ ಮತ್ತು ನಗರದಲ್ಲಿನ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
2015ರಿಂದ ನಗರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಯಲ್ಲಿ ನಾರಾಯಣಗೌಡ ಪಾಟೀಲ ಪ್ರಥಮ ದರ್ಜೆ ಲೆಕ್ಕಸಹಾಯಕನಾಗಿ ಕೆಲಸ ಮಾಡುತ್ತಿದನು ಎನ್ನಲಾಗಿದೆ. ನಾರಾಯಣಗೌಡ, ಮಾರ್ಚ್ 7,2019ರಿಂದ ಕಚೇರಿಗೆ ಬರದೇ , ಕಚೇರಿಯಲ್ಲಿ ರಜೆ ಕೂಡ ಪಡೆದಿರಲ್ಲಾ. ಅನಧೀಕೃತವಾಗಿ ತೆರಳಿದ್ದ ಎನ್ನಲಾಗಿದೆ. ನಿನ್ನೆ ತಡರಾತ್ರಿಯಿಂದ ನಗರದಲ್ಲಿ ಬೀಡುಬಿಟ್ಟಿರುವ ಮೂವರು ಐಟಿ ಅಧಿಕಾರಿಗಳ ತಂಡ ಆತ ವಾಸವಿದ್ದ ಬಾಡಿಗೆ ಮನೆ ಮತ್ತು ಕೆಲಸ ಮಾಡ್ತಿದ್ದ ಕಚೇರಿಯಲ್ಲಿ ಪರಿಶೀಲನೆ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
