ಬಿಜೆಪಿ ತೆಕ್ಕೆಗೆ ಜಗಳೂರು ಎಪಿಎಂಸಿ

0
7

ಜಗಳೂರು:

        ಎಪಿಎಂಸಿ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಲ್ಲಾಗಟ್ಟೆ ಕ್ಷೇತ್ರದ ಹನುಮಂತಪ್ಪ, ಉಪಾಧ್ಯಕ್ಷರಾಗಿ ದೊಣೆಹಳ್ಳಿ ಕ್ಷೇತ್ರದ ಗುರುಮೂರ್ತಿ ಶುಕ್ರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಒಟ್ಟು 15 ಸದಸ್ಯರನ್ನು ಹೊಂದಿದೆ.

        ಅಧ್ಯಕ್ಷ ಸ್ಥಾನಕ್ಕೆ ಪಲ್ಲಾಗಟ್ಟೆ ಕ್ಷೇತ್ರದ ಹನುಮಂತಪ್ಪ, ಹೆಚ್.ಎಂ.ಹೊಳೆ ಕ್ಷೇತ್ರದ ಎಸ್.ಕೆ.ರಾಮರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಗುರುಮೂರ್ತಿ, ಉಮಾದೇವಿ ನಾಮಪತ್ರ ಸಲ್ಲಿಸಿದ್ದರು. ಗುಪ್ತ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ನಡೆದ ಚುನಾವಣೆಯಲ್ಲಿ ಪಲ್ಲಾಗಟ್ಟೆ ಕ್ಷೇತ್ರದ ಹನುಮಂತಪ್ಪ 8 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಎಸ್.ಕೆ.ರಾಮರೆಡ್ಡಿ 7 ಮತಗಳನ್ನು ಪಡೆದು ಒಂದು ಮತದಿಂದ ಪರಾಜಿತಗೊಂಡಿದ್ದಾರೆ.

       ಉಪಾಧ್ಯಕ್ಷ ಸ್ಥಾನಕ್ಕೆನಡೆದ ಚುನಾವಣೆಯಲ್ಲಿ 15 ಮತಗಳಲ್ಲಿ ಗುರುಮೂರ್ತಿ, ಉಮಾದೇವಿಯವರಿಗೆ ತಲಾ 7 ಮತಗಳನ್ನು ಪಡೆದಿದ್ದು, ಒಂದು ಮತದಾನ ತಿರಸ್ಕøತಗೊಂಡ ಪರಿಣಾಮ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ್ ಶ್ರೀಧರಮೂರ್ತಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದಾದ ಮೇಲೂ ಗುರುಮೂತಿಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಆಯ್ಕೆ ಘೋಷಣೆ ಮಾಡಿದರು.

       ನೂತನ ಅಧ್ಯಕ್ಷರು ,ಉಪಾಧ್ಯಕ್ಷರುಗಳಿಗೆ ಮುಖಂಡರುಗಳಾದ ಶರಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಡಯ್ಯ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರುಗಳು ಹೂವಿನ ಹಾರ ಹಾಕುವ ಮೂಲಕ ಅಭಿನಂಧಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಗಿರೀಶ್ ನಾಯ್ಕ್, ಮಾಜಿ ಅಧ್ಯಕ್ಷರು ಹಾಗೂ ನಿರ್ಧೇಶಕರುಗಳಾದ ಎನ್.ಎಸ್.ರಾಜು. ಯು.ಜಿ.ಶಿವಕುಮಾರ್, ಸುರಡ್ಡಿಹಳ್ಳಿ ಶರಣಪ್ಪ, ಗೋವಿಂದರಾಜ್ ಸೇರಿದಂತೆ ಸದಸ್ಯರುಗಳು, ಸಿಬ್ಬಂಧಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here