ಭೋಪಾಲ್:
ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಕೆಲವು ದಿನಗಳ ಹಿಂದೆ ಕೊಟ್ಟ ಹೇಳಿಕೆ ಮುಸ್ಲಿಂಮರ ಅಲ್ಪ ಸಂಖ್ಯಾತ ಸಮುದಾಯದ ಶೇ.90ರಷ್ಟು ಮತಗಳು ಕಾಂಗ್ರೆಸ್‌ಗೆ ಸಿಗಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ನಿಮ್ಮ ಅಲಿ ನಿಮ್ಮಲ್ಲಿಯೇ ಇರಲಿ, ನಮಗೆ ಬಜರಂಗ ಬಲಿ ಸಾಕು’ ಎಂದು ತಿರುಗೇಟು ನೀಡುವ ಮೂಲಕ ತಮ್ಮ ಆತ್ಮವಿಶ್ವಾಸದ ಜೊತೆಗೆ ಪ್ರತ್ಯುತ್ತರ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಶನಿವಾರ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್‌ನವರಿಗೆ ಎಸ್‌ಸಿ/ ಎಸ್‌ಟಿ ಮತಗಳು ಬೇಡ, ಮುಸ್ಲಿಮರ ಮತಗಳು ಸಾಕು ಎಂಬ ಕಮಲ್ ನಾಥ್ ಹೇಳಿಕೆ ನೀಡಿದ್ದಾರೆ. ಪ್ರವಾದಿ ಮಹಮ್ಮದರ ಉತ್ತರಾಧಿಕಾರಿಯಾದ ಅಲಿ ಮುಸ್ಲಿಮರಿಗಿದ್ದರೆ, ಬಜರಂಗ ಬಲಿ ನಮ್ಮ ಜತೆಗಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
